ಶುಕ್ರವಾರದಿಂದ ಸಂಸತ್ ಮುಂಗಾರುಅಧಿವೇಶನ
ಕೇಂದ್ರದ ಯುಪಿಎ ಸರ್ಕಾರದ ಪ್ರಮುಖ ಬೆಂಬಲಿಗರಾದ ವಾಮಪಂಥೀಯ ಸಿಪಿಐಎಂ ನೇತೃತ್ವದ ಪಕ್ಷಗಳು ಅಮೇರಿಕದೊಂದಿಗಿನ ನಾಗರಿಕ ಬಳಕೆಯ ಅಣಶಕ್ತಿ-123 ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿರುವುದರಿಂದ ಯೋಜನೆಗೆ ಹಿನ್ನಡೆಯಾಗಿದೆ.
ಸರ್ಕಾರವನ್ನು ಬೆಂಬಲಿಸಿರುವ ಸಿಪಿಐಎಂ ನೀಡಿರುವ ಹೇಳಿಕೆಯಂತೆ ಪ್ರಸ್ತುತ ಭಾರತ-ಅಮೇರಿಕಾ ಅಣುಶಕ್ತಿ ಒಪ್ಪಂದವೇರ್ಪಡಲು ಬಿಡಲಾರೆವು. ಇದಕ್ಕೆ ನಮ್ಮ ಸಹಮತವಿಲ್ಲ ಎಂದಿದ್ದಾರೆ.
ಕಳೆದ ದಿನ ಸಿಪಿಐಎಂ ಕೇಂದ್ರ ಕಚೇರಿಯಲ್ಲಿ ಜರುಗಿದ ಸುಮಾರು ಒಂದೂವರೆ ತಾಸುಕಾಲದ ಚರ್ಚೆಯ ಬಳಿಕ ಸಿಪಿಐಎಂ ಹಾಗೂ ಇತರ ಸಂಘಟನೆಗಳು ಒಪ್ಪಂದವನ್ನು ಬೆಂಬಿಸಲು ನಿರಾಕರಿಸಿವೆ.
ಸಂಘಟನೆಗಳು ನೀಡಿರುವ ಹೇಳಿಕೆಯಂತೆ ಪ್ರಸಕ್ತ ಅಣುಶಕ್ತಿ ಒಪ್ಪಂದವು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸಂಸತ್ತಿನಲ್ಲಿ ನೀಡಿರುವ ಭರವಸೆಗಳಿಗೆ ಬದ್ಧವಾಗಿಲ್ಲ ಎಂಬ ಕಾರಣಕ್ಕಾಗಿ ಅದನ್ನು ಬೆಂಬಲಿಸಲಾರೆವು ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರವು ತನ್ನ ನಿಲುವಿನಂತೆ ಒಪ್ಪಂದ ಮುಂದುವರಿಸಲು ನಿರ್ಧರಿಸಿದರೆ ಎಡರಂಗ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯುವುದೇ ಎಂಬ ಪ್ರಶ್ನೆಗೆ, ಈ ವಿಷಯಗಳನ್ನು ವಾಮಪಂಥೀಯ ಸಂಘಟನೆಗಳ ಸಭೆ ಇನ್ನೂ ಚರ್ಚಿಸಿಲ್ಲ ಎಂಬುದಾಗಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ತಿಳಿಸಿದರು.
ತನ್ಮಧ್ಯೆ, ಪ್ರಕರಣದ ಪೂರ್ಣ ಪ್ರಯೋಜನ ಪಡೆಯಲು ವಿಪಕ್ಷ ಬಿಜೆಪಿ ನಿರ್ಧರಿಸಿದೆ. ಶುಕ್ರವಾರದಿಂದ ಆರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಣುಶಕ್ತಿ-123 ಒಪ್ಪಂದ ವಿರೋಧಿಸಿ ಮತಚಲಾಯಿಸಲು ವಿನಂತಿಸುವ ನಿರೀಕ್ಷೆ ಇದೆ.
ಬಿಜೆಪಿ ಈ ಮೊದಲೇ ತನ್ನ ವಿರೋಧ ದಾಖಲಿಸಿದೆ. ಇದೀಗ ಸರ್ಕಾರದ ಬೆಂಬಲಿಗರಾದ ವಾಮಪಂಥೀಯರೇ ವಿರೋಧಿಸಿರುವುದು ಒಪ್ಪಂದವನ್ನು ವಿರೋಧಿಸಿವೆ. ಆದಾಗ್ಯೂ ಚರ್ಚೆಗೆ ಸಿದ್ಧ ಎಂದು ಸರ್ಕಾರ ತಿಳಿಸಿದೆ.
|