ಉನ್ನತ ಶಿಕ್ಷಣದಲ್ಲಿ ಇತರ ಹಿಂದುಳಿದ ವಿಭಾಗ(ಒಬಿಸಿ)ಗಳ ಅಭ್ಯರ್ಥಿಗಳಿಗೆ 27ಶೇಕಡ ಮೀಸಲಾತಿ ನೀಡುವ ಆದೇಶದ ಮೇಲಿನ ತಡೆಯಾಜ್ಞೆ ತೆರವುಗೊಳಿಸಬೇಕೆಂಬ ಕೇಂದ್ರ ಸರ್ಕಾರದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪೀಠ ತಿರಸ್ಕರಿಸಿದೆ.
ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠವೊಂದು ಇಂದು ನೀಡಿರುವ ಆದೇಶದಂತೆ, ಒಬಿಸಿ ಮೀಸಲಾತಿ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿರುವ ಅರ್ಜಿ ಇತ್ಯರ್ಥವಾಗುವ ವರೆಗೆ ಆದೇಶ ಜಾರಿಗೊಳಿಸದಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಪ್ರಸ್ತುತ ತಡೆಯಾಜ್ಞೆ ತೆರವುಗೊಳಿಸುವಂತೆ ವಿನಂತಿಸಿದ ಅರ್ಜಿಯನ್ನು ತಿರಸ್ಕರಿಸಿರುವ ಪಂಚಸದಸ್ಯ ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠವು ಕೇಂದ್ರೀಯ ಶಿಕ್ಷಣ ಸಂಸ್ಥೆಗಳ(ಶಿಕ್ಷಣ ಪ್ರವೇಶದಲ್ಲಿನ ಮೀಸಲಾತಿ)ಕಾಯ್ದೆ-2006ನ್ನು ಅನುಷ್ಠಾನಗೊಳಿಸಬಾರದೆಂದು ತಿಳಿಸಿದೆ.
ಸುಪ್ರೀಂ ಕೋರ್ಟ್ನ ಪ್ರಧಾನ ನ್ಯಾಯಾಧೀಶ ನ್ಯಾ.ಮೂ. ಕೆ. ಜಿ. ಬಾಲಕೃಷ್ಣನ್ ಅವರ ನೇತೃತ್ವದ ಸಾಂವಿಧಾನಕ ಪೀಠವು ಯಾವುದೇ ಮಧ್ಯಂತರ ತೀರ್ಪು ನೀಡುವ ನಿರೀಕ್ಷೆಯನ್ನೂ ಅಲ್ಲಗಳೆದಿದೆ.
ಕೇಂದ್ರ ಸರ್ಕಾರದ ಹೊಸ ಒಬಿಸಿ ಮೀಸಲಾತಿ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಶೀಘ್ರವೇ ಜರುಗಲಿದೆ.
|