ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ದಾವೂದ್:ಎಫ್‌ಐಎಗೆ ಸಿಬಿಐ ಪತ್ರ
ಜಾಗತಿಕ ಭಯೋತ್ಪಾದಕ ದಾವೂದ್ ಇಬ್ರಾಹಿಂ ಬಂಧನ ಕುರಿತು ಜಾಗತಿಕವಾಗಿ ಹಬ್ಬಿರುವ ದ್ವಂದ್ವ ವರದಿಗಳ ನಿಜಾಂಶವೇನು ಎಂದು ಸ್ಪಷ್ಟಪಡಿಸುವಂತೆ ಭಾರತದ ಸಿಬಿಐ ತನಿಖಾತಂಡ ಪಾಕಿಸ್ತಾನದ ಎಫ್‌ಬಿಐಗೆ ಪತ್ರ ಬರೆದಿದೆ.

ದಾವೂದ್ ಇಬ್ರಾಹಿಂನ್ನು ಜಾಗತಿಕ ಭಯೋತ್ಪಾದಕ ಎಂಬುದಾಗಿ ಅಮೇರಿಕಾ ಘೋಷಿಸಿದೆ. ಈ ಮಧ್ಯೆ ಕಳೆದ ದಿನ ಪ್ರಥಮತಃ ಬಂದ ವರದಿಯಂತೆ ಪಾಕಿಸ್ಥಾನಿ ಐಎಸ್‌ಐ ಅಧಿಕಾರಿಗಳು ಆತನನ್ನು ಬಂಧಿಸಿದೆ ಎಂದಿದ್ದರೆ, ಆ ಬಳಿಕ ಇದನ್ನು ನಿರಾಕರಿಸುವ ಹೇಳಿಕೆಗಳು ಪ್ರಕಟವಾಗಿದ್ದುವು.

ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ (ಎಫ್‌ಐಎ)ಗೆ ಪತ್ರಬರೆದು ಪ್ರಕರಣ ನಿಜಾಂಶವನ್ನು ತಿಳಿಸುವಂತೆ ಭಾರತದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ವಿನಂತಿಸಿದೆ.

ಕರಾಚಿಯಲ್ಲಿ ಸಂಭವಿಸಿದ ಐಎಸ್‌ಐ ಅಧಿಕಾರಿಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ದಾವೂದ್ ಗಾಯಗೊಂಡಿರುವುದು, ಆತನೊಂದಿಗೆ ಸಹವರ್ತಿಗಳಾದ ಟೈಗರ್ ಮೆಮನ್, ಚೋಟಾಶಕೀಲ್ ಬಂಧನ ಇತ್ಯಾದಿಗಳ ಕುರಿತು ವಿಸ್ತೃತ ವರದಿ ಪ್ರಕಟವಾಗಿತ್ತು.

ದಾವೂದ್‌ಗೆ ನಿಷೇಧಿತ ಅಂತಾರಾಷ್ಟ್ರೀಯ ಉಗ್ರಗಾಮಿ ಸಂಘಟನೆ ಅಲ್‌ಖೈದಾ ಜೊತೆ ಸಂಬಂಧ ವಿರುವ ಕುರಿತು ಆರೋಪಗಳಿರುವ ಹಿನ್ನೆಲೆಯಲ್ಲಿ ಅಮೇರಿಕಾ ಆತನ ಬಂಧನ ಹಾಗೂ ಹಸ್ತಾಂತರವನ್ನು ಬಯಸಿತ್ತು.

ಭಾರತದಲ್ಲಿ ಆತ ನಡೆಸಿದ ಹಲವು ಸಂಯೋಜಿತ ಪಾತಕ ಕೃತ್ಯಗಳಿಗಾಗಿ ಅಂತರಾಷ್ಟ್ರೀಯ ಪೊಲೀಸ್ ದಳ ಇಂಟರ್‌ಪೊಲ್ ರೆಡ್ ಕಾರ್ನರ್ ನೊಟೀಸ್ ಜಾರಿಗೊಳಿಸಿತ್ತು.
ಮತ್ತಷ್ಟು
ಒಬಿಸಿ ಮೀಸಲಾತಿ: ತಡೆಯಾಜ್ಞೆ ತೆರವು ಇಲ್ಲ
ಅಣಶಕ್ತಿ 123ಒಪ್ಪಂದಕ್ಕೆ ವಾಮರ ವಿರೋಧ
ಸಂಜಯ್‌ದತ್‌ ಸು.ಕೋರ್ಟ್‌ಗೆ ಮೇಲ್ಮನವಿ
ಪ್ರವಾಹಗ್ರಸ್ತ ಪ್ರದೇಶಗಳಿಗೆ ಸೋನಿಯಾ ಭೇಟಿ
ದೇಶದಲ್ಲಿ ಮಳೆಗೆ 1200 ಮಂದಿ ಬಲಿ
ಕಾಶ್ಮೀರಕ್ಕಾಗಿ ದೆಹಲಿಗೆ ಬಾಂಬ್:ಅಲ್‌ಖೈದಾ