ದೇಶದ ಹೆಸರಾಂತ ಸಿನಿ ನಿರ್ಮಾಪಕ ಶ್ಯಾಮ್ ಬೆನಗಲ್ ಅವರು ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜೀವನದ ಸಮಗ್ರ ಸಾಧನೆ ಪರಿಗಣಿಸಿ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರತಿಷ್ಠಿತ ಫಾಲ್ಕೆ ಪ್ರಶಸ್ತಿಯು 2 ಲಕ್ಷ ರೂ. ನಗದು ಮೊತ್ತ, ಸ್ವರ್ಣ ಕಮಲ, ರೇಶ್ಮೇ ಜರಿಶಾಲು, ಪ್ರಶಸ್ತಿ ಪತ್ರ ಇತ್ಯಾದಿಗಳನ್ನೊಳಗೊಂಡಿರುತ್ತದೆ.
ಸರ್ಕಾರಿ ಮೂಲಗಳ ಪ್ರಕಾರ ಪ್ರಚಲಿತ ವರ್ಷಾಂತ್ಯದಲ್ಲಿ ಜರುಗುವ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಶ್ಯಾಮ್ ಬೆನಗಲ್ ಅವರಿಗೆ ಪ್ರಶಸ್ತಿ ಪ್ರಶಸ್ತಿ ಪ್ರದಾನ ಮಾಡುವರು.
ರಾಜ್ಯಸಭಾ ಸದಸ್ಯರೂ ಆಗಿರುವ ಬೆನಗಲ್‌ರಿಗೆ ಈ ಮುನ್ನ 1976ರಲ್ಲಿ ಪದ್ಮಶ್ರೀ, 1991ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಬೆನಗಲ್ ಅವರು 1970ರ ದಶಕದಲ್ಲಿ ನಿರ್ಮಿಸಿದ ಚೊಚ್ಚಲ ಸಿನೆಮಾ ಅಂಕುರ್ ಸಿನಿರಂಗದಲ್ಲಿ ಹೊಸ ಆಯಾಮವನ್ನು ನಿರ್ಮಿಸಿತ್ತು. ಇವರ ಚಿತ್ರಗಳು ಕಳೆದ ಕೆಲವು ದಶಕಗಳಿಂದ ಭಾರತ ಹಾಗೂ ಅಂತಾರಾಷ್ಟ್ರೀಯ ಫಿಲ್ಮೋತ್ಸವಗಳಿಗೆ ನಿರಂತರವಾಗಿ ಆಯ್ಕೆಯಾಗುತ್ತಿವೆ.
ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಡಿಸ್ಕವರಿ ಆಫ್ ಇಂಡಿಯಾ ಕೃತಿಯನ್ನಾಧರಿಸಿ 53 ಕಂಟುಗಳ ಮೆಘಾ ಧಾರವಾಹಿ ನಿರ್ಮಿಸಿರುವುದು ಈಗ ಇತಿಹಾಸ.
ಶ್ಯಾಮ್ ಬೆನಗಲ್ ಅವರ ಪ್ರಮುಖ ಸಿನಿಮಗಳೆಂದರೆ ನಿಶಾಂತ್, ಮಂಥನ್,ಭೂಮಿಕಾ,ಕೊಂಡೂರಾ,ಜುನೂನ್, ಕಲಿಯುಗ್, ಮಂಡಿ,ತ್ರಿಕಾಲ್, ಸೂರಜ್ ಕಾ ಸಾತ್ವಾನ್ ಗೋಡಾ, ಮಮ್ಮೋ, ಸರ್ದಾರಿ ಬೇಗಂ, ದಿ ಮೇಕಿಂಗ್ ಆಫ್ ಮಹಾತ್ಮ, ಝುಬೈದಾ, ನೇತಾಜಿ, ಸುಭಾಷ್ ಚಂದ್ರ ಭೋಸ್ ಮುಂತಾದವುಗಳಾಗಿವೆ.
|