ಪ್ರವಾಸಿಗಳ ಸ್ವರ್ಗ ಗೋವವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮಳೆಯಿಂದಾಗಿ ನೆರೆಹಾವಳಿ ತೀವ್ರವಾಗಿದ್ದು, ಸಾವುನೋವುಗಳ ಸಂಖ್ಯೆ ಹೆಚ್ಚಿದೆ.
ಗೋವಾ ರಾಜ್ಯದಲ್ಲಿ ಮಳೆಯಿಂದಾದ ಪ್ರಕೃತಿ ವಿಕೋಪದಿಂದ ಜನರು ತತ್ತರಿಸಿದ್ದಾರೆ. ಕಾಣಕೋಣದಲ್ಲಿ ಸಂಭಸಿಸಿದ ಭೂಕುಸಿತದಿಂದಾಗಿ ಕೊಂಕಣ ರೈಲು ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ. ಕರ್ನಾಟಕದ ಗಡಿ ಪ್ರದೇಶವಾಗಿರುವುದರಿಂದ ಮುಂಬೈ ಹಾಗೂ ದಕ್ಷಿಣ ರಾಜ್ಯಗಳಿಗೆ ಸಂಚರಿಸುವವರು ಅತಂತ್ರರಾಗಿದ್ದಾರೆ.
ಕರ್ನಾಟಕ, ಗೋವಾ, ಮಹಾರಾಷ್ಟ್ರ,ಮಧ್ಯಪ್ರದೇಶ , ಗುಜರಾತ್, ಉತ್ತರಪ್ರದೇಶ, ಬಿಹಾರ ರಾಜ್ಯಗಳಲ್ಲಿ ಮಳೆ ಅಪ್ಪಳಿಸಿದ ಪರಿಣಾಮ ಸಾವುನೋವು, ಆಸ್ತಿಪಾಸ್ತಿ ಹಾನಿ ಹೆಚ್ಚಿದೆ.
ಈ ಮಧ್ಯೆ, ಬಿಹಾರ, ಉತ್ತರ ಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಮಳೆ ಆರ್ಭಟ ಕಡಿಮೆಯಾಗಿದೆ. ಮೇರೆಮೀರಿ ಹರಿಯುತ್ತಿದ್ದ ನದಿ, ಜಲಾಶಯಗಳು ಸಹಜ ಸ್ಥಿತಿಗೆ ಮರಳುತ್ತಿವೆ.
ಗುಜರಾತ್‌ನಲ್ಲಿ ಸಂಭವಿಸಿದ ಮಳೆಯ ವಿಕಟಾಟ್ಟಹಾಸದಿಂದಾಗಿ ಕಳೆದ ದಿನದಿಂದೀಚೆಗೆ 9 ಮಂದಿ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಲ್ಲಿ ಮಳೆಯಿಂದಾಗಿ ನೆರೆಹಾವಳಿಗೆ ಹತ್ತಾರು ಮನೆಗಳು ತೇಲಿಹೋಗಿವೆ. ಜನಜೀವನ ದುಸ್ತರವಾಗಿದೆ. ಆಡಳಿತ ತುರ್ತು ಕಾರ್ಯಾಚರಣೆ ನಡೆಸುತ್ತಿದೆ.
ಬಿಹಾರದಲ್ಲಿ ಮಳೆಯ ಆರ್ಭಟ ಕಡೆಮೆಯಾಗಿದೆಯಾದರೂ, ದಿನಗಳ ಅಂತರದಲ್ಲಿ 26 ಮಂದಿ ಸಾವನ್ನಪ್ಪಿದ್ದಾರೆ. ಈ ಹಂಗಾಮಿನಲ್ಲಿ ಸಾವಿನ ಸಂಖ್ಯೆ 126ಕ್ಕೇರಿದೆ.
|