ಉಪರಾಷ್ಟ್ರಪತಿ ಚುನಾವಣೆಗಾಗಿ ನಡೆಯುತ್ತಿರುವ ಮತದಾನ ಪ್ರಕ್ರಿಯೇ ಆರಂಭವಾಗಿದ್ದು, ಯುಪಿಎ ಬೆಂಬಲಿತ ಅಭ್ಯರ್ಥಿ ಹಮೀದ್ ಅನ್ಸಾರಿ ತಮ್ಮ ಉಳಿದ ಅಭ್ಯರ್ಥಿಗಳಿಗಿಂತ ಮುನ್ನಡೆ ಸಾಧಿಸಿದ್ದಾರೆ.
ಎನ್ಡಿಎ ಬೆಂಬಲಿತ ನಜ್ಮಾ ಹೆಫ್ತುಲ್ಲಾ ಹಾಗೂ ರಶೀದ ಮಸೂದ್ ಕೂಡಾ ತಮ್ಮ ತಮ್ಮ ಅಧೃಷ್ಟವನ್ನು ಪರೀಕ್ಷಿಸುತ್ತಿದ್ದು ಸ್ಪರ್ಧೆಯಲ್ಲಿದ್ದಾರೆ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿರುವ ಒಟ್ಟು 788 ಸದಸ್ಯರ ಮತಗಳಲ್ಲಿ ಯುಪಿಎ ಹಾಗೂ ಬಿಎಸ್ಪಿ 425 ಮತಗಳ ಬೆಂಬಲವನ್ನು ತಾವು ಬೆಂಬಲಿಸಿದ ಹಮೀದ್ ಅನ್ಸಾರಿ ಅವರಿಗೆ ಮತನೀಡಿ ಗೆಲುವಿಗೆ ಸಹಕರಿಸಲಿದ್ದಾರೆ.
ಎನ್ಡಿಎ 240 ಸದಸ್ಯರನ್ನು ಬೆಂಬಲಿಸುತ್ತಿದ್ದು,ತೃಣಮೂಲ ಕಾಂಗ್ರೆಸ್ ಪಕ್ಷ ತನ್ನ ಬೆಂಬಲವನ್ನು ಯಾವ ಅಭ್ಯರ್ಥಿಗೆ ನೀಡುವುದನ್ನು ಬಹಿರಂಗಗೊಳಿಸದೇ ಇರುವುದು ಅಭ್ಯರ್ಥಿಗಳ ಪಾಳಯದಲ್ಲಿ ಆತಂಕ ಮೂಡಿಸಿದೆ.
ಶಿವಸೇನೆ ಅಂತಿಮವಾಗಿ ಬಿಜೆಪಿಯೊಂದಿಗೆ ಕೈಜೋಡಿಸಬಹುದು ಎಂದು ರಾಜಕೀಯ ನಾಯಕರು ವಿಶ್ಲೇಷಿಸಿದ್ದಾರೆ.
|