ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಭಾರತ - ಅಮೆರಿಕ ಪರಮಾಣು ಒಪ್ಪಂದ: ಪಾಕ್ ಆಕ್ಷೇಪ
ಭಾರತ ಮತ್ತು ಅಮೆರಿಕ ಪರಮಾಣು ವ್ಯವಹಾರ ಒಪ್ಪಂದವು ತನ್ನ ವಿರುದ್ಧ ಎಸಗಲಾಗಿರುವ ತಾರತಮ್ಯವೆಂದು ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದೆ.

ಈ ಒಪ್ಪಂದವು ಈ ಪ್ರಾಂತ್ಯದಲ್ಲಿನ ವ್ಯೂಹಾತ್ಮಕ ಸಂತುಲನೆಯ ಮೇಲೆ ಪ್ರಭಾವ ಬೀರುವುದರಿಂದ ಭಾರತಕ್ಕೆ ತಾನು ಸಮನಾಗಲು ಅವಶ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವೆನೆಂದು ಪಾಕಿಸ್ತಾನ ಹೇಳಿದೆ.

ರಾಷ್ಟ್ರೀಯ ಅಸೆಂಬ್ಲಿಯಲ್ಲಿಂದು ಮಾತನಾಡಿದ ವಿದೇಶ ವ್ಯವಹಾರ ಸಚಿವ ಖುರ್ಷಿದ್ ಎಂ.ಕಸೂರಿ ಅವರು,ಪಾಕಿಸ್ತಾನ ಒಂದು ಶಾಂತಿಪ್ರಿಯ ರಾಷ್ಟ್ರ. ಈ ಪ್ರಾಂತ್ಯದಲ್ಲಿ ಯಾವುದೇ ರೀತಿಯಲ್ಲಿ ವ್ಯೂಹಾತ್ಮಕ ಸಂತುಲನೆಗೆ ಧಕ್ಕೆ ಉಂಟಾಗುವುದನ್ನು ಅದು ಇಷ್ಟಪಡುವುದಿಲ್ಲ. ಅಂತೆಯೇ ಅದು ಎಲ್ಲ ಬೆಳವಣಿಗೆಗಳನ್ನು ಬಹಳ ಎಚ್ಚರಿಕೆಯಿಂದ ಮತ್ತು ಜಾಗ್ರತೆಯಿಂದ ಗಮನಿಸುತ್ತಿದೆ ಎಂದು ಹೇಳಿದರು.

ಭಾರತ ಮತ್ತು ಅಮೆರಿಕ ಪರಮಾಣು ಒಪ್ಪಂದದಿಂದ ಪಾಕಿಸ್ತಾನಕ್ಕಾಗಿರುವ ತಾರತಮ್ಯವನ್ನು ಈಗಾಗಲೇ ಅಮೆರಿಕದ ಗಮನಕ್ಕೆ ತರಲಾಗಿದೆ. ಈ ಒಪ್ಪಂದದಿಂದ ಉಂಟಾಗಿರುವ ಅಸಮತೋಲನವನ್ನು ಸರಿಪಡಿಸಲು ಪಾಕಿಸ್ತಾನ ನಿಶ್ಚಿತವಾಗಿಯೂ ಪ್ರತಿಯೊಂದು ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಕಸೂರಿ ಹೇಳಿದರು.
ಮತ್ತಷ್ಟು
ನೆರೆ ಹಾವಳಿ ರಾಜ್ಯಗಳಿಗೆ ಅಮೆರಿಕ ನೆರವು
ಉಪರಾಷ್ಟ್ರಪತಿ ಹುದ್ದೆ : ಅನ್ಸಾರಿ ಗೆಲುವಿನ ದಾರಿಯಲ್ಲಿ
ಇಂದು 'ಕ್ವಿಟ್ ಇಂಡಿಯಾ' ಸ್ಮರಣೆ
ಗೋವಾದಲ್ಲಿ ಭೂಕುಸಿತ:ರೈಲು ಸ್ಥಗಿತ
ಶ್ಯಾಮ್‌ ಬೆನಗಲ್‌ಗೆ ಫಾಲ್ಕೆ ಪ್ರಶಸ್ತಿ
ಶಿಹಾಬುದ್ದೀನ್‌ಗೆ ಮತದಾನ ಅವಕಾಶ