ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ತಾಜ್ ಜತೆ ರೈಲ್ವೇ ಇಲಾಖೆ ಒಪ್ಪಂದ
ಹೊಟೇಲ್ ತಾಜ್, ಬೆಸ್ಟ್ ವೆಸ್ಟರ್ನ್ ಮತ್ತು ಆರ್ಕಿಡ್ ಸೇರಿದಂತೆ ಪ್ರಮುಖ ಹೊಟೇಲ್‌ಗಳು ದೇಶಾದ್ಯಂತ ಬಜೆಟ್ ಹೊಟೇಲ್‌ ನಿರ್ಮಾಣಕ್ಕಾಗಿ ಭಾರತೀಯ ರೈಲ್ವೆಯೊಂದಿಗೆ ಒಪ್ಪಂದ ಮಾಡಿಕೊಂಡಿವೆ.

ರೈಲ್ವೆಗೆ ಸೇರಿದ ಭೂಮಿಯಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ರೈಲ್ವೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ಬಜೆಟ್‌ ಹೊಟೇಲ್‌ಗಳನ್ನು ನಿರ್ಮಿಸಲಾಗುವ ಸ್ಥಳಗಳನ್ನು ಈಗಾಗಲೇ ರೈಲ್ವೇ ಇಲಾಖೆ ಗುರುತಿಸಿದೆ. ಈ ಹೊಟೇಲ್‌ಗಳನ್ನು ಸಾರ್ವಜನಿಕ ಮತ್ತು ಖಾಸಗಿ ವಲಯ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತಿದೆ.

ಈ ಒಪ್ಪಂದ ಮೂಲಕ ರೈಲ್ವೇ ಇಲಾಖೆ ಸುಮಾರು 300 ಕೋಟಿ ಹೆಚ್ಚುವರಿ ಆದಾಯ ಗಳಿಸುವ ಅಂದಾಜು ಮಾಡಲಾಗಿದೆ. ಹೀಗಿದ್ದಾಗ್ಯೂ ಆದಾಯ ಹಂಚಿಕೆಯ ಒಪ್ಪಂದವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ರೈಲ್ವೇ ಕ್ಯಾಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮದ ಹಿರಿಯ ಅಧಿಕಾರಿಯೊಬ್ಬರು ಬಜೆಟ್ ಹೊಟೇಲ್ ಯೋಜನೆ ಕುರಿತು ತಿಳಿಸಿದ್ದಾರೆ.
ಮತ್ತಷ್ಟು
ಭಾರತ - ಅಮೆರಿಕ ಪರಮಾಣು ಒಪ್ಪಂದ: ಪಾಕ್ ಆಕ್ಷೇಪ
ನೆರೆ ಹಾವಳಿ ರಾಜ್ಯಗಳಿಗೆ ಅಮೆರಿಕ ನೆರವು
ಉಪರಾಷ್ಟ್ರಪತಿ ಹುದ್ದೆ : ಅನ್ಸಾರಿ ಗೆಲುವಿನ ದಾರಿಯಲ್ಲಿ
ಇಂದು 'ಕ್ವಿಟ್ ಇಂಡಿಯಾ' ಸ್ಮರಣೆ
ಗೋವಾದಲ್ಲಿ ಭೂಕುಸಿತ:ರೈಲು ಸ್ಥಗಿತ
ಶ್ಯಾಮ್‌ ಬೆನಗಲ್‌ಗೆ ಫಾಲ್ಕೆ ಪ್ರಶಸ್ತಿ