ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಅಣು ಒಪ್ಪಂದ : ಧೈರ್ಯವಿದ್ದರೆ ಬೆಂಬಲ ಹಿಂತೆಗೆದುಕೊಳ್ಳಿ
ಭಾರತ ನಾಗರಿಕ ಪರಮಾಣು 123 ಒಪ್ಪಂದ ಕುರಿತಂತೆ ಅಸಮಧಾನವಿದ್ದಲ್ಲಿ ಸರಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಳ್ಳಿ ಎಂದು ಎಡಪಕ್ಷಗಳಿಗೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸವಾಲು ಹಾಕಿದ್ದಾರೆ.

ಭಾರತ ಮತ್ತು ಅಮೆರಿಕ ದೇಶಗಳ ನಡುವೆ ನಾಗರಿಕ ಪರಮಾಣು ಒಪ್ಪಂದ ಗೌರವಾನ್ವಿತ ಒಪ್ಪಂದವಾಗಿದ್ದು, ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಸಂದರ್ಭದಲ್ಲಿ ಪುನರ್‌ ಪರಿಶೀಲನೆಯಾಗಲಿ, ಹಿಂದೆ ಹೋಗುವ ಪ್ರಶ್ನೆಯಾಗಲಿ ಉದ್ಭವಿಸುವುದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.

ನಾನು ಈ ಅಣು ಒಪ್ಪಂದ ಕುರಿತು ಎಡಪಕ್ಷಗಳಿಗೆ ವಿವರಿಸಿದ್ದೇನೆ. ನಂತರವೂ ಅಸಮಧಾನವಿದ್ದಲ್ಲಿ ಬೆಂಬಲ ಹಿಂತೆಗೆದುಕೊಳ್ಳಲಿ ಎಂದು ಕೊಲ್ಕತ್ತಾದಲ್ಲಿ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಡಾ. ಸಿಂಗ್ ಹೇಳಿದ್ದಾರೆ.

ಲೋಕಸಭೆಯಲ್ಲಿ 64 ಸದಸ್ಯರ ಬೆಂಬಲವನ್ನು ಪಡೆದ ಎಡಪಕ್ಷಗಳ ಸಿಪಿಐ -ಎಂ ನಾಯಕ ಪ್ರಕಾಶ ಕಾರಟ್ ಹಾಗೂ ಸಿಪಿಐ ನಾಯಕ ಎಬಿ ಬರ್ದನ್ ಅವರು ನಾಗರಿಕ ಪರಮಾಣು ಒಪ್ಪಂದ ಕುರಿತಂತೆ ಸರಕಾರದ ನಿಲುವನ್ನು ತೀವ್ರವಾಗಿ ಖಂಡಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಡಾ.ಸಿಂಗ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಅಮೆರಿಕದೊಂದಿಗೆ ನಾಗರಿಕ ಪರಮಾಣು ಒಪ್ಪಂದ ಕುರಿತಂತೆ ಸರಕಾರ ಮುಂದುವರೆದಲ್ಲಿ ಭಾರಿ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಎಡಪಕ್ಷಗಳು ಕೇಂದ್ರ ಸರಕಾರವನ್ನು ಎಚ್ಚರಿಸಿವೆ.
ಮತ್ತಷ್ಟು
ಉಪರಾಷ್ಟ್ರಪತಿಯಾಗಿ ಹಮೀದ್ ಅನ್ಸಾರಿ ಆಯ್ಕೆ
ತಾಜ್ ಜತೆ ರೈಲ್ವೇ ಇಲಾಖೆ ಒಪ್ಪಂದ
ಭಾರತ - ಅಮೆರಿಕ ಪರಮಾಣು ಒಪ್ಪಂದ: ಪಾಕ್ ಆಕ್ಷೇಪ
ನೆರೆ ಹಾವಳಿ ರಾಜ್ಯಗಳಿಗೆ ಅಮೆರಿಕ ನೆರವು
ಭಾರತ ನೆರೆ ಹಾವಳಿ ಸಂತ್ರಸ್ತರಿಗೆ ಅಮೆರಿಕಾ ನೆರವು
ಉಪರಾಷ್ಟ್ರಪತಿ ಹುದ್ದೆ : ಅನ್ಸಾರಿ ಗೆಲುವಿನ ದಾರಿಯಲ್ಲಿ