ಆಸ್ಸಾಂ ರಾಜ್ಯದ ಅಂಗಲಾಂಗ್ ಜಿಲ್ಲೆಯಲ್ಲಿ ಹಿಂದಿ ಭಾಷಿಕರ ಮನೆಯ ಮೇಲೆ ದಾಳಿ ಮಾಡಿದ ಉಗ್ರರು 11 ಮಂದಿಯನ್ನು ಹತ್ಯೆ ಮಾಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಯುನೈಟೆಡ್ ಲಿಬರೇಶನ್ ಫ್ರಂಟ್ ಹಾಗೂ ಕರ್ಬಿ ಲೊಂಗರಿ ನ್ಯಾಷನಲ್ ಲಿಬರೇಶನ್ ಫ್ರಂಟ್ ಗೆ ಸೇರಿದ ಉಗ್ರರ ತಂಡ ದೇಹೊರಿ ಗ್ರಾಮಕ್ಕೆ ದಾಳಿ ಮಾಡಿ ಮನೆಯಲ್ಲಿದ್ದವರನ್ನು ಹೊರಗೆ ತಂದು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಬೋಕಜಾನ್ ಗ್ರಾಮಕ್ಕೆ ದಾಳಿ ನಡೆಸಿ ಗಣೇಶ್ ಪ್ರಸಾದ್ ಎನ್ನುವ ಹಿಂದಿ ಭಾಷಿಕ ಅಂಗಡಿ ಮಾಲೀಕನನ್ನು ಹತ್ಯೆ ಮಾಡಿದ್ದಲ್ಲದೇ 2 ವರ್ಷದ ಮಗುವನ್ನು ಹತ್ಯೆಗೈದಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರನ್ನು ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಉಗ್ರರು ಸ್ವಾತಂತ್ರ್ಯ ದಿನಾಚರಣೆಯನ್ನು ಬಹಿಷ್ಕಾರಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಭದ್ರತಾ ಪಡೆಗಳು,ಸೈನಿಕ ಬಲವನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ತರುಣ ಗೋಗಯಿ ಹಿಂದಿ ಭಾಷಿಕರು ಹೆಚ್ಚಾಗಿರುವ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
|