ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪೊಲೀಸ್ ಎನ್‌ಕೌಂಟರ್ : ಖಾರಿ ಬಲಿ
ಜಮ್ಮು ನಗರದ ಹೃದಯ ಭಾಗದಲ್ಲಿ ಎನ್‌ಕೌಂಟರ್‌ವೊಂದರಲ್ಲಿ ಭದ್ರತಾ ಸಿಬ್ಬಂದಿಯವರು 2005ರ ಅಯೋಧ್ಯ ದಾಳಿಯ ಹಿಂದಿನ ರೂವಾರಿಯೆಂದು ನಂಬಲಾಗಿರುವ ಪ್ರಮುಖ ಜೈಶ್-ಇ-ಮೊಹಮದ್ ಉಗ್ರನನ್ನು ಹೊಡೆದುರುಳಿಸಿದ್ದು, ಆತನ ಐವರು ಸಹಾಯಕರನ್ನು ಬಂಧಿಸಿದ್ದಾರೆ.

ನಗರದ ಜಾನಿಪುರ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೃತನಾದ ವ್ಯಕ್ತಿ ಜೈಶ್-ಇ-ಮೊಹಮದ್‌ನ ವಿಭಾಗೀಯ ಕಮಾಂಡರ್ ಆದ ಸೈಫುಲ್ಲಾ ಖಾರಿ ಎಂದು ಐಜಿಪಿ(ಜಮ್ಮು ವಲಯ) ಎಸ್ ಪಿ ವೈದ್ ಹೇಳಿದ್ದಾರೆ.

ನಿಖರವಾದ ಮಾಹಿತಿ ಮೇರೆಗೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ದೆಹಲಿ ಪೊಲೀಸ್‌ನ ಜಂಟಿ ತಂಡವೊಂದು ನಗರದ ಜಾನಿಪುರ್ ಪ್ರದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅಲ್ಟ್ರಾಗಳು ದಾಳಿ ನಡೆಸುವುದಕ್ಕೆ ಯೋಜಿಸುತ್ತಿದ್ದ ಉಗ್ರಗಾಮಿಗಳ ಅಡಗುದಾಣದ ಮೇಲೆ ದಾಳಿ ನಡೆಸಿದರು.

ದೆಹಲಿ ಪೊಲೀಸ್‌ನ ಒಬ್ಬ ಸಬ್ ಇನ್‌ಸ್ಪೆಕ್ಟರ್ ಸಹ ಗುಂಡಿನ ಕಾಳಗದಲ್ಲಿ ಗಾಯಗೊಂಡಿದ್ದಾರೆ.

ಆರು ಮಂದಿ ಉಗ್ರರು ಹಾಗೂ ಒಬ್ಬ ನಾಗರಿಕ ಸಾವಿಗೀಡಾದ 2005ರಲ್ಲ ಅಯೋಧ್ಯದಲ್ಲಿನ ದಾಳಿಯನ್ನು ಯೋಜಿಸಿ, ನಿರ್ವಹಿಸಿದ್ದಕ್ಕೆ ಕರಿ ಜವಾಬ್ದಾರನಾಗಿದ್ದನು.
ಮತ್ತಷ್ಟು
ಉಗ್ರರಿಂದ 11 ಹಿಂದಿ ಭಾಷಿಕರ ಹತ್ಯೆ
ಅಣು ಒಪ್ಪಂದ : ಧೈರ್ಯವಿದ್ದರೆ ಬೆಂಬಲ ಹಿಂತೆಗೆದುಕೊಳ್ಳಿ
ಉಪರಾಷ್ಟ್ರಪತಿಯಾಗಿ ಹಮೀದ್ ಅನ್ಸಾರಿ ಆಯ್ಕೆ
ತಾಜ್ ಜತೆ ರೈಲ್ವೇ ಇಲಾಖೆ ಒಪ್ಪಂದ
ಭಾರತ - ಅಮೆರಿಕ ಪರಮಾಣು ಒಪ್ಪಂದ: ಪಾಕ್ ಆಕ್ಷೇಪ
ನೆರೆ ಹಾವಳಿ ರಾಜ್ಯಗಳಿಗೆ ಅಮೆರಿಕ ನೆರವು