ಭಾರತ-ಅಮೆರಿಕ ನಾಗರಿಕ ಪರಮಾಣು ಒಡಂಬಡಿಕೆ ಕುರಿತು ಸಂಸತ್ತಿನಲ್ಲಿ ಆಗಸ್ಟ್ 14 ಮತ್ತು 16ರಂದು ಚರ್ಚೆ ನಡೆಯಲಿದೆ.
ಈ ವಿಷಯವನ್ನು ಪ್ರಕಟಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಿ ಆರ್ ದಾಸ್‌ಮುನ್ಷಿ, ಈ ವಿಷಯದ ಕುರಿತು ಸಾಧ್ಯವಾದಷ್ಟು ಬೇಗ ಚರ್ಚೆಯಾಗಬೇಕೆಂದು ಸರಕಾರ ಬಯಸುತ್ತದೆಂದು ಹೇಳಿದರು.
ಸರಕಾರ ಏನನ್ನು ಮುಚ್ಚಿಡಲು ಬಯಸುವುದಿಲ್ಲ, ಈ ವಿಚಾರದ ಕುರಿತು ಚರ್ಚಿಸಲು ಸಿದ್ಧ ಎಂದು ವರದಿಗಾರರಿಗೆ ತಿಳಿಸಿದರು.
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಈ ಕುರಿತು ಆಗಸ್ಟ್ 13ರಂದು ಸಂಸತ್ತಿನಲ್ಲಿ ಹೇಳಿಕೆ ನೀಡಲಿದ್ದಾರೆ.
ಸರಕಾರದ ಎಡ ಮೈತ್ರಿಕೂಟ ಹಾಗೆಯೇ ಎನ್‌ಡಿಎ ಮತ್ತು ಯುಎನ್‌ಪಿಎ ಕಳೆದ ತಿಂಗಳು ಮಾಡಿಕೊಳ್ಳಲಾದ 123 ಒಪ್ಪಂದವನ್ನು ತಿರಸ್ಕರಿಸಿದ್ದು, ಈ ವಿಷಯದ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಒತ್ತಾಯಿಸುತ್ತಿವೆ.
ಆದರೂ, ಎನ್‌ಡಿಎ ಮತ್ತು ಯುಎನ್‌ಪಿಎ ಮತದಾನಕ್ಕೆ ಅವಕಾಶ ನೀಡುವ ನಿಯಮ 184ರಡಿ ಚರ್ಚೆಗೆ ಬೇಡಿಕೆಯಿತ್ತಿದ್ದರೆ, ಎಡರಂಗ ನಿಯಮ 193ರಡಿ ಮತದಾನವಿಲ್ಲದ ಚರ್ಚೆಗೆ ಒತ್ತಾಯಿಸಿದೆ.
|