ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪ್ರಧಾನಿ ರಾಜಿನಾಮೆ ಬೆದರಿಕೆ
ಎಡಪಕ್ಷಗಳು ಭಾರತ ಮತ್ತು ಅಮೆರಿಕ ಪರಮಾಣು ಒಪ್ಪಂದವನ್ನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಪದತ್ಯಾಗ ಮಾಡುವ ಬೆದರಿಕೆ ಹಾಕಿದ್ದಾರೆ ಎಂಬ ವರದಿಗಳನ್ನು ಕೇವಲ ವದಂತಿ ಎಂದು ಸರಕಾರ ತಳ್ಳಿಹಾಕಿದೆ.

ಇದು ಕೇವಲ ಗಾಳಿ ಮಾತು ಮಾತ್ರ ಎಂದು ಹೇಳುವೆ.ನಮ್ಮ ಪ್ರಧಾನಿಯವರು ಯಶಸ್ಸಿನೊಂದಿಗೆ ಪೂರ್ಣಾವಧಿ ಪೂರೈಸಲು ಮತ್ತು ರಾಷ್ಟ್ರೀಯ ಸಮಾನ ಕನಿಷ್ಠ ಕಾರ್ಯಕ್ರಮದಲ್ಲಿ ನೀಡಲಾಗಿರುವ ಆಶ್ವಾಸನೆಗಳನ್ನು ಈಡೇರಿಸಲು ದೃಢಸಂಕಲ್ಪ ತಾಳಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪಿ.ದಾಸ್ ಮುನ್ಶಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಕಳೆದ ತಿಂಗಳು ಪೂರ್ಣಗೊಳಿಸಲಾದ 123ಪರಮಾಣು ಒಪ್ಪಂದವನ್ನು ಎಡಪಕ್ಷಗಳು,ಪ್ರತಿಪಕ್ಷಗಳು ಮತ್ತು ತೃತೀಯರಂಗ ತಿರಸ್ಕರಿಸಿದ್ದು, ಸಂಸತ್ತಿನಲ್ಲಿ ಈ ಕುರಿತು ಚರ್ಚೆ ನಡೆಸಬೇಕೆಂದು ಆಗ್ರಹಿಸುತ್ತಿವೆ.

ಇದೇ ವೇಳೆ ಎಡಪಕ್ಷಗಳು ಕೂಡ ತಮ್ಮ ಉನ್ನತ ನಾಯಕರೊಂದಿಗೆ ಪ್ರಧಾನಿಯವರೊಂದಿಗೆ ದೂರವಾಣಿ ಸಂಭಾಷಣೆ ವೇಳೆ ಪದತ್ಯಾಗದ ಕೊಡುಗೆಯಿತ್ತರೆಂಬ ವರದಿಗಳನ್ನು ತಳ್ಳಿಹಾಕಿವೆ.

ಸಿಪಿಐ ಲೋಕಸಭೆಯಲ್ಲಿನ ಸಂಸದೀಯ ಪಕ್ಷ ನಾಯಕ ಗುರುದಾಸ್ ದಾಸ್ ಗುಪ್ತ ಅವರಲ್ಲಿ ಪ್ರಶ್ನಿಸಿದಾಗ ದಯವಿಟ್ಟು ವದಂತಿಗಳನ್ನು ನಂಬಬೇಡಿ ಎಂದು ಹೇಳಿದರು.
ಮತ್ತಷ್ಟು
ನಾಗರಿಕ ಪರಮಾಣು ಒಪ್ಪಂದ ಚರ್ಚೆ
ಪೊಲೀಸ್ ಎನ್‌ಕೌಂಟರ್ : ಖಾರಿ ಬಲಿ
ಉಗ್ರರಿಂದ 11 ಹಿಂದಿ ಭಾಷಿಕರ ಹತ್ಯೆ
ಅಣು ಒಪ್ಪಂದ : ಧೈರ್ಯವಿದ್ದರೆ ಬೆಂಬಲ ಹಿಂತೆಗೆದುಕೊಳ್ಳಿ
ಉಪರಾಷ್ಟ್ರಪತಿಯಾಗಿ ಹಮೀದ್ ಅನ್ಸಾರಿ ಆಯ್ಕೆ
ತಾಜ್ ಜತೆ ರೈಲ್ವೇ ಇಲಾಖೆ ಒಪ್ಪಂದ