ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಉಪರಾಷ್ಟ್ರಪತಿಯಾಗಿ ಅನ್ಸಾರಿ ಪ್ರಮಾಣ ವಚನ
ನಿರೀಕ್ಷೆಯಂತೆ ಯುಪಿಎ-ಎಡಪಕ್ಷಗಳ ಅಭ್ಯರ್ಥಿ ಮೊಹಮ್ಮದ್ ಹಮೀದ್ ಅನ್ಸಾರಿ ಅವರು ತ್ರಿಕೋಣ ಸ್ಪರ್ಧೆಯಲ್ಲಿ ಸುಲಭ ಜಯಗಳಿಸಿ ದೇಶದ 13ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದು,ಇಂದು ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

70 ಹರೆಯದ ಅನುಭವಿ ರಾಜತಂತ್ರಜ್ಞ ಮತ್ತು ಶಿಕ್ಷಣ ತಜ್ಞ ಅನ್ಸಾರಿ ಅವರು ಎನ್‌ಡಿಎ ಅಭ್ಯರ್ಥಿ ನಜ್ಮಾ ಹೆಫ್ತುಲ್ಲಾ ಮತ್ತು ತೃತೀಯರಂಗದ ಅಭ್ಯರ್ಥಿ ರಶೀದ್ ಮಸೂದ್ ಅವರನ್ನು ಸೋಲಿಸಿ, ಗೆಲುವು ಪಡೆದಿದ್ದರು.ಅನ್ಸಾರಿ ಅವರಿಗೆ 455ಮತಗಳು ದೊರೆತರೆ, ಹೆಫ್ತುಲ್ಲಾಗೆ 222ಮತಗಳು ಮತ್ತು ಮಸೂದ್ ಅವರಿಗೆ ಕೇವಲ 75ಮತಗಳು ಲಭಿಸಿದ್ದವು. ಹತ್ತು ಮತಗಳನ್ನು ಅಸಿಂಧು ಎಂದು ಸಾರಲಾಯಿತು.

ರಾಜ್ಯಸಭೆ ಮತ್ತು ಲೋಕಸಭೆಯ ಒಟ್ಟು 762ಸದಸ್ಯರು ಮತ ಚಲಾಯಿಸಿದ್ದರು.788 ಸದಸ್ಯರ ಚುನಾವಣಾ ಸದನದಲ್ಲಿ ಲೋಕಸಭೆ , ರಾಜ್ಯಸಭೆಯಲ್ಲಿ 783ಸದಸ್ಯರಿದ್ದಾರೆ. ಅನ್ಸಾರಿ ಅವರು ಭೈರೋನ್ ಸಿಂಗ್ ಶೇಖಾವತ್ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವುದು ಬಹುತೇಕ ಖಚಿತವಾಗಿತ್ತು.

ಆದರೆ ಅವಿರೋಧ ಆಯ್ಕೆ ಬಯಸದ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಪ್ರಾದೇಶಿಕ ಪಕ್ಷಗಳ ಗುಂಪು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.
ಮತದಾನ ನಿನ್ನೆ ಸಂಜೆ 5ಗಂಟೆಗೆ ಮುಕ್ತಾಯಗೊಂಡಿತ್ತು.ಸೋನಿಯಾಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರು ಮೊದಲಿಗೆ ಮತದಾನ ಮಾಡಿದ್ದರು.
ಮತ್ತಷ್ಟು
ಪ್ರಧಾನಿ ರಾಜಿನಾಮೆ ಬೆದರಿಕೆ
ನಾಗರಿಕ ಪರಮಾಣು ಒಪ್ಪಂದ ಚರ್ಚೆ
ಪೊಲೀಸ್ ಎನ್‌ಕೌಂಟರ್ : ಖಾರಿ ಬಲಿ
ಉಗ್ರರಿಂದ 11 ಹಿಂದಿ ಭಾಷಿಕರ ಹತ್ಯೆ
ಅಣು ಒಪ್ಪಂದ : ಧೈರ್ಯವಿದ್ದರೆ ಬೆಂಬಲ ಹಿಂತೆಗೆದುಕೊಳ್ಳಿ
ಉಪರಾಷ್ಟ್ರಪತಿಯಾಗಿ ಹಮೀದ್ ಅನ್ಸಾರಿ ಆಯ್ಕೆ