ಗುವಾಹಟಿಯಿಂದ 185ಮೈಲಿ ದೂರದಲ್ಲಿರುವ ಕರ್ಬಿ ಎಂಬಲ್ಲಿ ಉಲ್ಭಾ ಮತ್ತು ಇನ್ನೊಂದು ಉಗ್ರರ ತಂಡ ನಡೆಸಿದ ಎರಡು ಪ್ರತ್ಯೇಕ ದಾಳಿಯಲ್ಲಿ ಬಲಿಯಾದವರ ಸಂಖ್ಯೆ 16 ತಲುಪಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯರು, ಮಕ್ಕಳು ಸೇರಿದಂತೆ ಒಟ್ಟು 16 ಮಂದಿ ಹಿಂದಿ ಭಾಷಿಕರನ್ನು ಗುಂಡಿಟ್ಟು ಕೊಂದಿದ್ದು, ಕಳೆದ ಮೂರು ದಿನಗಳಲ್ಲಿ ಉಗ್ರರು ಇಲ್ಲಿ ದಾಂಧಲೆ ನಡೆಸಿದ್ದಾರೆ.
ಹೌಡಾಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯೊಳಗೆ ಬರುವ ದಿಹೋರಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಉಲ್ಫಾ ಮತ್ತು ಕರ್ಬಿ ಲೋಂಗ್ರಿ ನ್ಯಾಶನಲ್ ಫ್ರಂಟ್ ಭಯೋತ್ಪಾದಕರು ಜಂಟಿಯಾಗಿ ದಾಳಿ ನಡೆಸಿ, ಮನೆಯೊಳಗಿದ್ದ ಕುಟುಂಬದ ಸದಸ್ಯರನ್ನು ಹೊರಗೆ ಕರೆದು ಅವರೆನ್ನೆಲ್ಲ ಗುಂಡಿಕ್ಕಿ ಕೊಂದಿದ್ದರು.ಇವರಲ್ಲಿ ಹನ್ನೊಂದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು,ಇನ್ನಿಬ್ಬರು ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೋಕಾಜಾನ್ ವ್ಯಾಪ್ತಿಯ ಸುಖಂಜನ್ ಎಂಬಲ್ಲಿ ಶನಿವಾರ ರಾತ್ರಿ ಕೆಎನ್‌ಎಲ್‌ಎಫ್ ಉಗ್ರರು ನಡೆಸಿದ ದಾಳಿಗೆ ಐವರು ಬಲಿಯಾಗಿದ್ದು, ಇವರೆಲ್ಲ ಹಿಂದಿ ಭಾಷಿಕರು ಎಂದು ಹೇಳಲಾಗಿದೆ. ಈ ಗ್ರೆನೇಡ್ ದಾಳಿಯಲ್ಲಿ ಎರಡು ವರ್ಷದ ಮಗುವೊಂದು ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ.
|