ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಕಾಂಗ್ರೆಸ್ ಸಿಎಂಪಿ ಬದ್ದವಾಗಿರಲಿ: ಕಾರಟ್
ಪ್ರಕಾಶ್ ಕಾರಟ್
PTI PhotographerPTI
ಪ್ರಧಾನಿ ಮನ್‌ಮೊಹನ್ ಸಿಂಗ್ ಅವರು, ಅಮೆರಿಕದೊಂದಿಗೆ ರಚನಾತ್ಮಕ ಸಂಬಂಧಗಳನ್ನು ಕಾಯ್ದುಕೊಳ್ಳುವ ವಿಚಾರದಲ್ಲಿ ಬಹಳ ಸಂವೇದನಾಶೀಲರಾಗಿದ್ದಾರೆ. ಆದರೆ ಅಮೆರಿಕದೊಂದಿಗೆ ರಚನಾತ್ಮಕ ಸಂಬಂಧಗಳನ್ನು ಬೆಳೆಸುವುದು ಯುಪಿಎ ಸರಕಾರದ, ಸಾಮಾನ್ಯ ಕನಿಷ್ಟ ಕಾರ್ಯಕ್ರಮದಡಿಯಲ್ಲಿ ಬರುವುದಿಲ್ಲ ಎಂಬುದನ್ನು ಕಾಂಗ್ರೆಸ್ ಗಮನಿಸಬೇಕು ಎಂದು ಸಿಪಿಐ ಜನರಲ್ ಸೆಕ್ರೆಟರಿ ಪ್ರಕಾಶ ಕಾರಟ್ ಹೇಳಿದ್ದಾರೆ.

ತಿರುವನಂತಪುರದಲ್ಲಿ ಪತ್ರಿಕಾಗೊಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಕಾರಟ್, ಸರಕಾರವನ್ನು ಮುಂದುವರಿಸುವುದು ಬಿಟ್ಟದ್ದು ಕಾಂಗ್ರೆಸ್‌ಗೆ ಬಿಟ್ಟ ವಿಷಯ. ಅಣು ಒಪ್ಪಂದವನ್ನು ಎಡಪಕ್ಷಗಳು ಸಂಸತ್ತಿನಲ್ಲಿ ವಿರೋಧಿಸಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಸರಕಾರವನ್ನು ಮುಂದುವರಿಸುವ ಇಚ್ಚೆ ಕಾಂಗ್ರೆಸ್‌ಗೆ ಇದೆಯೊ ಇಲ್ಲವೋ ಎಂಬುದನ್ನು ಎಡಪಕ್ಷಗಳು ಕೇಳಲಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾರಟ್, ಪ್ರಧಾನಿ ಮನ್‌ಮೊಹನ್ ಸಿಂಗ್ ಅವರು ಅಮೆರಿಕದೊಂದಿಗೆ ರಚನಾತ್ಮಕ ಸಂಬಂಧ ಬೆಳೆಸುವುದರಲ್ಲಿ ಉತ್ಸುಕರಾಗಿದ್ದಾರೆ. ಈ ವಿಚಾರ ಕೇವಲ ಸಂವೇದನೆ ಅಥವಾ ಭಾವನೆಗಳನ್ನು ಒಳಗೊಂಡಿಲ್ಲ. ಅಣು ತಂತ್ರಜ್ಞಾನ ಆಮದಿಗೆ ಸಂಬಂಧ ಪಟ್ಟ ಗಂಭಿರ ವಿಚಾರ ಎಂದು ಕಾರಟ್ ಸ್ಪಷ್ಟಪಡಿಸಿದ್ದಾರೆ.

ಆಡಳಿತಾರೂಡ ಯುಪಿಎದ ಸಾಮಾನ್ಯ ಕನಿಷ್ಟ ಕಾರ್ಯಕ್ರಮದಲ್ಲಿ ಅಮೆರಿಕದೊಂದಿಗೆ ರಚನಾತ್ಮಕ ಸಂಬಂಧಗಳ ಅಭಿವೃದ್ದಿ ಕುರಿತು ಶಬ್ದವೇ ಇಲ್ಲದಿರುವಾಗ ಈ ವಿಚಾರವನ್ನು ಕಾಂಗ್ರೆಸ್ ಗಮನಿಸಿ, ಅಣು ಒಪ್ಪಂದದ ಜಾರಿಗೆ ಸಂಬಂಧಪಟ್ಟಂತೆ ಮುಂದುವರಿಯಬೇಕು ಎಂದು ಹೇಳಿದರು. ಸಿಎಮ್‌ಪಿಗೆ ಹೊರತಾದ ವಿಷಯಗಳನ್ನು ಕಾಂಗ್ರೆಸ್ ಹೊರಗಿಡುವ ಪ್ರಯತ್ನ ಮಾಡಬೇಕು ಎಂದು ಹೇಳಿದ್ದಾರೆ.
ಮತ್ತಷ್ಟು
ಅಸ್ಸಾಂ ಉಲ್ಫಾ ಉಗ್ರರ ದಾಳಿ: ಬಲಿ ಸಂಖ್ಯೆ 16
ಎಡಪಕ್ಷ ಬೆಂಬಲ ಹಿಂದೆಗೆಯಲಿ - ಬಿಜೆಪಿ ಸವಾಲು
ಉಪರಾಷ್ಟ್ರಪತಿಯಾಗಿ ಅನ್ಸಾರಿ ಪ್ರಮಾಣ ವಚನ
ಪ್ರಧಾನಿ ರಾಜಿನಾಮೆ ಬೆದರಿಕೆ
ನಾಗರಿಕ ಪರಮಾಣು ಒಪ್ಪಂದ ಚರ್ಚೆ
ಪೊಲೀಸ್ ಎನ್‌ಕೌಂಟರ್ : ಖಾರಿ ಬಲಿ