ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಎಡಪಕ್ಷಗಳ ವಿರೊಧ:ಸಂಸತ್ತಿನಲ್ಲಿ ಪ್ರಧಾನಿ ಉತ್ತರ
ಇಂಡೊ-ಅಮೆರಿಕ ಅಣು ಒಪ್ಪಂದ
ಪ್ರಧಾನಿ ಮನ್‌ಮೋಹನ್ ಸಿಂಗ್
WDPIB
ಭಾರತ-ಅಮೆರಿಕ ನಡವಿನ ಅಣುಶಕ್ತಿ ಒಪ್ಪಂದದ ಕುರಿತು ಪ್ರಧಾನಿ ಡಾ ಮನ್‌ಮೊಹನ್ ಸಿಂಗ್ ಅವರು ಇಂದು ಸಂಸತ್‌ನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

123 ಒಪ್ಪಂದ ಎಂದು ಕರೆಯಲಾಗುತ್ತಿರುವ ನಾಗರಿಕ ಅಣುಶಕ್ತಿ ಒಪ್ಪಂದದ ಕುರಿತು ಪ್ರಧಾನಿ ಮನ್‌ಮೊಹನ್ ಸಿಂಗ್ ಅವರು ಮೊದಲ ಬಾರಿಗೆ ಸಂಸತ್‌ನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜುಲೈ,2005 ರಲ್ಲಿ ಜಾರ್ಜ್ ಬುಷ್ ಮತ್ತು ಪ್ರಧಾನಿ ನಡುವೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಒಪ್ಪಂದದ ಜಾರಿಗೆ ಈಗಾಗಲೇ ಕೇಂದ್ರ ಸಚಿವ ಸಂಪುಟ ಅನುಮತಿಯನ್ನು ನೀಡಿದೆ.

ಒಪ್ಪಂದಕ್ಕೆ ಎಡಪಕ್ಷಗಳು ವಿರೋಧ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಭಾಷಣಕ್ಕೆ ಮುನ್ನ ಎಡಪಕ್ಷಗಳ ನಾಯಕರನ್ನು ಪ್ರಧಾನಿ ಬೇಟಿಯಾಗಿ ಚರ್ಚಿಸಲಿದ್ದಾರೆ. ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಉಭಯ ಪಕ್ಷಗಳು ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಲಿದ್ದಾರೆ. ಭಾರತ-ಅಮೆರಿಕ ಅಣು ಒಪ್ಪಂದವನ್ನು ವಿರೋಧಿಸಿ ತಮ್ಮ ನೆತೃತ್ವದ ಸರಕಾರವನ್ನು ದೈರ್ಯ ಇದ್ದರೆ, ಕೆಳಗಿಸಬಹುದು ಎಂದು ಶನಿವಾರ, ಪ್ರಧಾನಿ ಮನ್‌ಮೊಹನ್ ಸಿಂಗ್ ಅವರು ಎಡಪಕ್ಷಗಳಿಗೆ ಸವಾಲು ಹಾಕಿದ್ದರು.


ಪ್ರಧಾನಿ ಮನ್‌ಮೊಹನ್ ಸಿಂಗ್ ಅವರು, ವಿರೋಧ ಪಕ್ಷಗಳು ಎತ್ತಿರುವ ಬಹುತೇಕ ಸವಾಲುಗಳಿಗೆ ತಮ್ಮ ಭಾಷಣದಲ್ಲಿ ಉತ್ತರ ನೀಡಲಿದ್ದಾರೆ.

ಒಪ್ಪಂದದ ಪರಿಣಾಮವಾಗಿ ಭಾರತದ ಹಿತಾಸಕ್ತಿಗಳು ಬಲಯಾಗುವುದಿಲ್ಲ. ಮತ್ತು ಅಮೆರಿಕದ ಹಿತಾಸಕ್ತಿಗಳಿಗೆ ಬಲಿಯಾಗುವುದಿಲ್ಲ. ಭಾರತದ ಸಾರ್ವಭೌಮತೆಗೆ ಒಪ್ಪಂದ ದಕ್ಕೆ ತರುವುದಿಲ್ಲ.
ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಭಾರತ ಸಹಿ ಹಾಕದೇ ಅಣ್ವಸ್ತ್ರ ತಂತ್ರಜ್ಞಾನವನ್ನು ಭಾರತ ಪಡೆಯಬಹುದಾಗಿದೆ ಎಂದು ಸಂಸತ್ತಿನಲ್ಲಿ ಸ್ಪಷ್ಟಿಕರಣ ನೀಡುವ ಸಾಧ್ಯತೆ ಇದೆ.
ಮತ್ತಷ್ಟು
ಕಾಂಗ್ರೆಸ್ ಸಿಎಂಪಿ ಬದ್ದವಾಗಿರಲಿ: ಕಾರಟ್
ಅಸ್ಸಾಂ ಉಲ್ಫಾ ಉಗ್ರರ ದಾಳಿ: ಬಲಿ ಸಂಖ್ಯೆ 16
ಎಡಪಕ್ಷ ಬೆಂಬಲ ಹಿಂದೆಗೆಯಲಿ - ಬಿಜೆಪಿ ಸವಾಲು
ಉಪರಾಷ್ಟ್ರಪತಿಯಾಗಿ ಅನ್ಸಾರಿ ಪ್ರಮಾಣ ವಚನ
ಪ್ರಧಾನಿ ರಾಜಿನಾಮೆ ಬೆದರಿಕೆ
ನಾಗರಿಕ ಪರಮಾಣು ಒಪ್ಪಂದ ಚರ್ಚೆ