ಭಾರತ ಮತ್ತು ಅಮೆರಿಕ ನಡುವೆ ಮಾಡಿಕೊಳ್ಳಲಿರುವ ನಾಗರಿಕ ಪರಮಾಣು ತಂತ್ರಜ್ಞಾನ ಒಪ್ಪಂದವು, ಭಾರತದ ಸಾರ್ವಭೌಮತೆಗೆ ಮತ್ತು ಭವಿಷ್ಯತ್ತಿನ ದಿನಗಳಲ್ಲಿ ತನ್ನ ರಕ್ಷಣೆಗೆ ಅಣ್ವಸ್ತ್ರ ಪರಿಕ್ಷೆಯನ್ನು ಮಾಡಲು ಅಡ್ಡಿಬರದು ಎಂದು ಪ್ರಧಾನಿ ಮನ್‌ಮೋಹನ್ ಸಿಂಗ್ ಅವರು, ಸಂಸತ್ತಿನಲ್ಲಿಂದು ಸ್ಪಷ್ಟನೆ ನೀಡಿದ್ದಾರೆ.
ವಿರೋಧ ಪಕ್ಷಗಳ ಗದ್ದಲಗಳ ನಡುವೆ ಲೋಕಸಭೆಯಲ್ಲಿಂದು ಒಪ್ಪಂದದ ಬಗ್ಗೆ ಸ್ಪಷ್ಟಿಕರಣ ನೀಡಿದ ಪ್ರದಾನಿ ಮನ್‌ಮೋಹನ್ ಸಿಂಗ್, "ಒಂದು ವೇಳೆ ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವುದಕ್ಕೆ ಅಣ್ವಸ್ತ್ರ ಪರಿಕ್ಷೆ ಅವಶ್ಯವಿದ್ದಲ್ಲಿ, ಒಪ್ಪಂದವು ಭಾರತವನ್ನು ಯಾವುದೇ ರೀತಿಯಲ್ಲಿ ಅಣ್ವಸ್ತ್ರ ಪರಿಕ್ಷಿಸಿದಂತೆ ತಡೆಯಲಾರದು ಎಂದು ಹೇಳಿದ್ದಾರೆ.
ಒಪ್ಪಂದದಲ್ಲಿ ಯಾವುದೇ ಅಂಶಗಳು ಭಾರತದ ಅಣ್ನಸ್ತ್ರ ಕಾರ್ಯಕ್ರಮಕ್ಕೆ ಅಡ್ಡಿಬರಲಾರವು ನಮ್ಮ ಮೂರು ಹಂತದ ಅಣ್ವಸ್ತ್ರ ಯೋಜನೆಯಲ್ಲಿ ಅಣ್ವಸ್ತ್ರ ಯೋಜನೆ ಮತ್ತು ಅಣ್ವಸ್ತ್ರ ಅಭಿವೃದ್ದಿ ಮತ್ತು ಸಂಶೋಧನೆಗೆ ದಕ್ಕೆ ತರುವಂತಹ ಇಲ್ಲವೆ ನಮ್ಮ ಯೋಜನೆಗಳಿಗೆ ಅಡ್ಡಿಯಾಗುವಂತಹ ಅಂಶಗಳಿಲ್ಲ.
ಒಪ್ಪಂದ ಮುಂಬರುವ ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವುದಿಲ್ಲ.ಇಲ್ಲವೆ ಕಾನೂನಿನ ಅನ್ವಯ ದೇಶದ ರಕ್ಷಣೆಗೆ ಸಂಬಂಧ ಪಟ್ಟಂತೆ ಮುಂಬರುವ ಸರಕಾರ ಪೇಚಿಗೆ ಸಿಲುಕಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಭಾರತ ಕೆಲವೊಂದು ಅಂತಾರಾಷ್ಟ್ರೀಯ ನಿಯಮಾವಳಿಗೆ ಒಪ್ಪಂದದ ಅನ್ವಯ ಬದ್ದವಾಗಲಿದ್ದು, ಅಂತಾರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರದ ಸುರಕ್ಷಾ ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮ ಅಣ್ವಸ್ತ್ರ ಅಭಿವೃದ್ದಿ ಕಾರ್ಯಕ್ರಮ ಇಲ್ಲವೆ ಅಣುಶಕ್ತಿ ಕೇಂದ್ರಗಳನ್ನು ಅಂತಾರಾಷ್ಟ್ರೀಯ ಸಮುದಾಯದ ಪರಿಶೀಲನೆಗೆ ಒಪ್ಪಿಗೆ ಸೂಚಿಸಿಲ್ಲ ಎಂದು ಹೇಳಿದ್ದಾರೆ.
|