ಖೂಂದ್ರುದಲ್ಲಿನ ಸಶಸ್ತ್ರ ಸೇನಾಪಡೆಗೆ ಸೇರಿದ ಶಸ್ತ್ರಾಗಾರಕ್ಕೆ ತಗುಲಿದ ಅಕಸ್ಮಿಕ ಬೆಂಕಿಯಲ್ಲಿ 25 ಮಂದಿ ಕಣ್ಮರೆಯಾಗಿದ್ದು ಇನ್ನೂ ಅವರ ಪತ್ತೆಯಾಗಿಲ್ಲ ಎಂದು ಸೇನಾ ಪಡೆಯ ಮೂಲಗಳು ವರದಿ ಮಾಡಿವೆ.
ಕಣ್ಮರೆಯಾದವರಲ್ಲಿ ಒರ್ವ ಮಿಲಿಟರಿ ಅಧಿಕಾರಿ, ಹತ್ತು ಸೈನಿಕರು ಸೇರಿದ್ದಾರೆ. ಶಸ್ತ್ರಾಗಾರದಲ್ಲಿ ಇನ್ನೂ 13 ಶವಗಳು ಇವೆ ಎಂದು ಹರಡಿದ ವದಂತಿಗೆ ಅಲ್ಲಿನ ನಾಗರಿಕರು ರೊಚ್ಚಿಗೆದ್ದು, ಸಮಿಪದ ಪರಿಹಾರ ಕೇಂದ್ರವನ್ನು ದೋಚಿದ್ದಾರೆ.
ಕಣ್ಮರೆಯಾದವರ ಕುರಿತು ಮಾಹಿತಿ ನೀಡಿದ ಲೆ ಜನರಲ್ ಎಚ್ ಎಸ್ ಪನಾಂಗ್ ಅವರು ಒರ್ವ ಮಿಲಿಟರಿ ಅಧಿಕಾರಿ, 9 ಜವಾನರು ಮತ್ತು 13 ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಇಬ್ಬರು ನಾಗರಿಕರು ಕಣ್ಮರೆಯಾಗಿದ್ದಾರೆ.
ಕಣ್ಮರೆಯಾಗಿರುವವರ ಕುರಿತು ಈಗ ಎನೂ ಹೇಳಲಿಕ್ಕಾಗದು. ಶಸ್ತ್ರಾಗಾರದಲ್ಲಿನ 25 ಕಟ್ಟಡಗಳು ಸ್ಫೋಟಕ್ಕೆ ಕುಸಿದಿಲ್ಲ. ಆದ್ದರಿಂದ ಅಲ್ಲಿರುವ, ಯಾವುದಾದರೂ ಒಂದು ಕಟ್ಟಡದಲ್ಲಿ ಸಿಲುಕಿರುವ ಸಾದ್ಯತೆ ಇದೆ ಎಂದು ಹೇಳಿದ್ದಾರೆ.
ಪ್ರಾಥಮಿಕ ತನಿಖಾ ವರದಿಗಳ ಪ್ರಕಾರ ದುರ್ಘಟನೆಯು ಶೆಡ್ ನಂ 16ರಲ್ಲಿ ಸಂಭವಿಸಿದೆ. ಆ ಸಂದರ್ಭದಲ್ಲಿ ಮೆಜರ್ ತರುಣ್ ಕುಮಾರ್ ಮತ್ತು ಆರು ಜವಾನರು ಆ ಶೆಡ್‌ನಲ್ಲಿ ಇದ್ದರು ಎಂದು ಹೇಳಿದರು.
ಪಕ್ಕದಲ್ಲಿ ಇದ್ದ ಇನ್ನೊಂದು ಕಟ್ಟದಲ್ಲಿ ಬಿಳಿ ಪಾಸ್ಫರಸ್‌ನ್ನು ಶೇಖರಿಸಿ ಇಡಲಾಗಿತ್ತು ಬೆಂಕಿಯ ಸ್ಪರ್ಷಕ್ಕೆ ಗಂಧಕ ಬರುತ್ತಲೆ ಸರಣಿಯಾಗಿ ಸ್ಫೋಟ ಸಂಭವಿಸಿದೆ ಎಂದು ಮಾಹಿತಿ ನೀಡಿದರು.
|