ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸರಕಾರ ಉಳಿಸಲು ಎಲ್ಲ ಕಸರತ್ತು : ಪ್ರಣಬ್
ಭಾರತ-ಅಮೆರಿಕ ಪರಮಾಣು ಒಪ್ಪಂದವನ್ನು ತಿರಸ್ಕರಿಸುವ "ಮಿತ್ರ"ರಾದ ಎಡಪಕ್ಷಗಳು, ಯುಪಿಎ ಸರಕಾರವು "ಗಂಭೀರ ರಾಜಕೀಯ ಪರಿಣಾಮಗಳನ್ನು" ಎದುರಿಸಲಿದೆ ಎಂದು ಎಚ್ಚರಿಸಿರುವುದರ ಹೊರತಾಗಿಯೂ, ಕಾಂಗ್ರೆಸ್ ನೇತೃತ್ವದ ಸರಕಾರವು ಪೂರ್ಣಾವಧಿ ಪೂರೈಸಲು ಎಲ್ಲ ಸಾಧ್ಯತೆಗಳನ್ನು ಅನುಸರಿಸಲಿದೆ.

ಆದರೆ, ಮೂಲ ತತ್ವಗಳೊಂದಿಗೆ ರಾಜಿ ಇಲ್ಲ ಎಂದು ಕೇಂದ್ರವು ಇದೇ ವೇಳೆ ಸ್ಪಷ್ಟಪಡಿಸಿದೆ. 123 ಪರಮಾಣು ಒಪ್ಪಂದದ ಕುರಿತ ಇತ್ತೀಚೆಗಿನ ಸಮಸ್ಯೆಗಳಿಂದಾಗಿ ಸರಕಾರ ಪತನವಾಗುವುದಿಲ್ಲ ಎಂದು ಬಲವಾಗಿ ನಂಬಿರುವುದಾಗಿ ಕಾಂಗ್ರೆಸ್‌ನ ಪ್ರಧಾನ "ಟ್ರಬಲ್ ಶೂಟರ್" ಆಗಿರುವ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ತಿಳಿಸಿದ್ದಾರೆ. ಯುಪಿಎ ಸರಕಾರದ ಐದು ವರ್ಷಗಳ ಅವಧಿಯು 2009ರ ಮೇ ತಿಂಗಳಲ್ಲಿ ಕೊನೆಗೊಳ್ಳಲಿದೆ.

ಸಮ್ಮಿಶ್ರ ಸರಕಾರವನ್ನು ಉಳಿಸಿಕೊಳ್ಳುವ ಜವಾಬ್ದಾರಿಯು ಕಾಂಗ್ರೆಸ್ ಮೇಲಿದೆ ಮತ್ತು ಈ ಒಪ್ಪಂದದಲ್ಲಿ ಮುಂದುವರಿದಿದ್ದೇ ಆದಲ್ಲಿ ಕಾಂಗ್ರೆಸ್ ಪಕ್ಷವು ಇದಕ್ಕಾಗಿ ಗಂಭೀರ ಬೆಲೆ ತೆರಲಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರು ಎಚ್ಚರಿಕೆ ನೀಡಿದ್ದರ ಬೆನ್ನಿಗೆ ಪ್ರಣಬ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
ಮತ್ತಷ್ಟು
ಶಸ್ತ್ರಾಗಾರಕ್ಕೆ ಬೆಂಕಿ: ಇನ್ನೂ 25 ನಾಗರಿಕರ ಕಣ್ಮರೆ
ಅಣ್ವಸ್ತ್ರ ಪರಿಕ್ಷೆ ಭಾರತದ ಹಕ್ಕು: ಪ್ರಧಾನಿ
ಭೂಮಿ ಹೊಂದುವ ಅಧಿಕಾರವಿಲ್ಲದಿದ್ದಲ್ಲಿ ಜೈಲಿಗೆ ತಳ್ಳಿ-ಅಮಿತಾಭ್
ಎಡಪಕ್ಷಗಳ ವಿರೊಧ:ಸಂಸತ್ತಿನಲ್ಲಿ ಪ್ರಧಾನಿ ಉತ್ತರ
ಕಾಂಗ್ರೆಸ್ ಸಿಎಂಪಿ ಬದ್ದವಾಗಿರಲಿ: ಕಾರಟ್
ಅಸ್ಸಾಂ ಉಲ್ಫಾ ಉಗ್ರರ ದಾಳಿ: ಬಲಿ ಸಂಖ್ಯೆ 16