ಅಣು ಒಪ್ಪಂದ ಕುರಿತಂತೆ ಪಾಲುದಾರ ಪಕ್ಷಗಳ ನಡುವೆ ಹೆಚ್ಚುತ್ತಿರುವ ಭಿನ್ನಮತದ ಹಿನ್ನೆಲೆಯಲ್ಲಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಎಡಪಕ್ಷಗಳ ನಾಯಕರಾದ ಪ್ರಕಾಶ ಕಾರಟ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಪ್ರಧಾನಿ ಮನಮೋಹನ್ ಸಿಂಗ್ ವಿದೇಶಾಂಗ ಸಚಿವ ಪ್ರಣಭ ಮುಖರ್ಜಿಯವರೊಂದಿಗೆ ಇಂದು ಕಾರಟ್ ಅವರನ್ನು ಭೇಟಿ ಮಾಡಿ ಅಣು ಒಪ್ಪಂದ ಕುರಿತಂತೆ ತಾವು ತೆಗೆದುಕೊಂಡಿರುವ ನಿಲುವುಗಳನ್ನು ವಿವರಿಸಿ ದೇಶದ ಹಿತಾಸಕ್ತಿಗೆ ಧಕ್ಕೆ ಬರುವಂತಹ ಯಾವುದೇ ನಿಲುವನ್ನು ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರಟ್ ಅವರು ಪ್ರಧಾನಿ ಅವರ ಅಣು ಒಪ್ಪಂದ ಕುರಿತಂತೆ ತೆಗೆದುಕೊಂಡಿರುವ ನಿಲುವುಗಳನ್ನು ಪ್ಯಾಲಿಟ್ ಬ್ಯುರೋಗೆ ತಿಳಿಸುವುದಾಗಿ ಹೇಳಿದರು.
ಅಗಸ್ಟ್ 17 ಅಥವಾ 18 ರಂದು ಕೊಲ್ಕತ್ತಾದಲ್ಲಿ ಎಡಪಕ್ಷಗಳ ಸಭೆ ನಡೆಯಲಿದ್ದು ಅಣು ಒಪ್ಪಂದ ಕುರಿತಂತೆ ನಿರ್ಧರಿಸಲಾಗುವುದು ಎಂದು ಕಾರಟ್ ತಿಳಿಸಿದ್ದಾರೆ.
ಕಳೆದ 10 ತಿಂಗಳಿನಿಂದ ಯುಪಿಎ ಹಾಗೂ ಎಡಪಕ್ಷಗಳ ಸಮನ್ವಯ ಸಮಿತಿ ಸಭೆ ನಡೆಯದಿರುವುದು ಸಮನ್ವಯದ ಕೊರತೆಯ ಕಾರಣವಾಗಿದೆ ಎಂದು ಎಡಪಕ್ಷಗಳು ತಿಳಿಸಿವೆ.
|