ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಅಣು ಒಪ್ಪಂದ: ಪ್ರಧಾನಿಗೆ ಸೋನಿಯಾ ಅಭಿನಂದನೆ
ಭಾರತ ಅಮೆರಿಕ ನಡುವೆ ನಡೆಯುತ್ತಿರುವ ನಾಗರಿಕ ಪರಮಾಣು ಒಪ್ಪಂದ ಕುರಿತಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರು ತೆಗೆದುಕೊಂಡ ನಿಲುವುಗಳು ಸ್ವಾಗತಾರ್ಹವಾಗಿವೆ ಎಂದು ಯುಪಿಎ ಮುಖ್ಯಸ್ಥೆ ಶ್ಲಾಘಿಸಿದ್ದಾರೆ.

ಕಾಂಗ್ರೆಸ್ ಪಾರ್ಲಿಮೆಂಟರಿ ಪಾರ್ಟಿಯಲ್ಲಿ ಮಾತನಾಡಿದ ಪಾಲುದಾರ ಪಕ್ಷಗಳ ನಡುವೆ ಒಪ್ಪಂದ ಕುರಿತಂತೆ ಭಿನ್ನ ನಿಲುವುಗಳಿದ್ದರೂ ಪ್ರಧಾನಿ ಅವರ ಶ್ರಮ ಅಭಿನಂದನಾರ್ಹವೆಂದು ಹೇಳಿದರು.

ಪರಮಾಣು ಒಪ್ಪಂದ ಸರಿಯಾದ ದಾರಿಯಲ್ಲಿ ಸಾಗುತ್ತಿದ್ದರು ಭಾರತೀಯ ಜನತಾಪಕ್ಷ ಒಪ್ಪಂದವನ್ನು ರಾಜಕೀಯಗೊಳಿಸುತ್ತಿರುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ರಾಷ್ಟ್ರದ ಹಿತಾಸಕ್ತಿಗೆ ತೊಂದರೆಯಾಗುವಂತಹ ನಿಲುಗಳನ್ನು ಸರಕಾರ ತೆಗೆದುಕೊಂಡಿಲ್ಲ ಎಡಪಕ್ಷಗಳಿಗೆ ಒಪ್ಪಂದ ಕುರಿತಂತೆ ಭಿನ್ನಮತವಿದೆ ಹೊರತು ಸರಕಾರದ ಬಗ್ಗೆ ಅಲ್ಲ ಎಂದು ಹೇಳಿದರು.

ರಾಷ್ಟ್ರದ ಹಿತವನ್ನು ಕಾಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಇದರಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ವಿರೋಧ ಪಕ್ಷಗಳು ಅರಿಯಬೇಕು ಎಂದು ಕಿವಿಮಾತು ಹೇಳಿದರು.
ಮತ್ತಷ್ಟು
ಮನಮೋಹನ್ ಸಿಂಗ್, ಕಾರಟ್ ಭೇಟಿ
ಸರಕಾರ ಉಳಿಸಲು ಎಲ್ಲ ಕಸರತ್ತು : ಪ್ರಣಬ್
ಶಸ್ತ್ರಾಗಾರಕ್ಕೆ ಬೆಂಕಿ: ಇನ್ನೂ 25 ನಾಗರಿಕರ ಕಣ್ಮರೆ
ಅಣ್ವಸ್ತ್ರ ಪರಿಕ್ಷೆ ಭಾರತದ ಹಕ್ಕು: ಪ್ರಧಾನಿ
ಭೂಮಿ ಹೊಂದುವ ಅಧಿಕಾರವಿಲ್ಲದಿದ್ದಲ್ಲಿ ಜೈಲಿಗೆ ತಳ್ಳಿ-ಅಮಿತಾಭ್
ಎಡಪಕ್ಷಗಳ ವಿರೊಧ:ಸಂಸತ್ತಿನಲ್ಲಿ ಪ್ರಧಾನಿ ಉತ್ತರ