ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸ್ವತಂತ್ರ ದಿನಾಚರಣೆ : ರಾಷ್ಟ್ರಪತಿ ಭಾಷಣ
ಭಾರತವು ಆಗಸ್ಟ್ 15 ರಂದು 60ನೇ ಸ್ವತಂತ್ರ ದಿನಾಚರಣೆ ಆಚರಿಸುತ್ತಿರುವ ಪ್ರಯುಕ್ತ ಇಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆಯು ತಿಳಿಸಿದೆ.

ರಾಷ್ಟ್ರಪತಿಗಳ ಭಾಷಣವು ಮಂಗಳವಾರ ಸಂಜೆ 7.00 ಗಂಟೆಗೆ ದೂರದರ್ಶದಲ್ಲಿ ಇಂಗ್ಲಿಷ್‌ನಲ್ಲಿ ಪ್ರಸಾರ ಮಾಡಲಾಗುತ್ತಿದ್ದು, ಅದರ ನಂತರ ಹಿಂದಿಯಲ್ಲಿ ಪ್ರಸಾರ ಮಾಡಲಾಗುವುದು ಎಂದು ಭವನ ತಿಳಿಸಿದೆ.

ಅದೇ ಸಯಮಕ್ಕೆ ಸರಿಯಾಗಿ ಆಕಾಶವಾಣಿ (ಆಲ್ ಇಂಡಿಯಾ ರೇಡಿಯೊ)ಯಲ್ಲಿಯೂ ರಾಷ್ಟ್ರಪತಿಗಳ ಭಾಷಣವನ್ನು ಪ್ರಸಾರ ಮಾಡಲಾಗುತ್ತಿದೆ.

ರಾಷ್ಟ್ರಪತಿಗಳ ಭಾಷಣವನ್ನು ಪ್ರತಿಯೊಂದು ಪ್ರಾದೇಶಿಕ ಭಾಷೆಗಳಲ್ಲಿ ಇಂದು ರಾತ್ರಿ 9.30 ಕ್ಕೆ ಆಯಾ ಪ್ರಾದೇಶಿಕ ಆಕಾಶವಾಣಿ ಕೇಂದ್ರದಿಂದ ಪ್ರಸಾರವಾಗುತ್ತದೆ ಎಂದು ಹೇಳಲಾಗಿದೆ.

ಕಳೆದ ತಿಂಗಳು ಅಧಿಕಾರ ಸ್ವೀಕರಿಸಿದ ನಂತರ, ಇದೇ ಪ್ರಥಮ ಬಾರಿಗೆ ಪ್ರತಿಭಾ ಪಾಟೀಲ್ ಅವರು ರಾಷ್ಟ್ರಪತಿಯಾಗಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.
ಮತ್ತಷ್ಟು
ಗೋವಾ:ಕಾಂಗ್ರೆಸ್‌ಗೆ ಯುಜಿಡಿಪಿ ಬೆಬಲ
ಅಣು ಒಪ್ಪಂದ: ಪ್ರಧಾನಿಗೆ ಸೋನಿಯಾ ಅಭಿನಂದನೆ
ಮನಮೋಹನ್ ಸಿಂಗ್, ಕಾರಟ್ ಭೇಟಿ
ಸರಕಾರ ಉಳಿಸಲು ಎಲ್ಲ ಕಸರತ್ತು : ಪ್ರಣಬ್
ಶಸ್ತ್ರಾಗಾರಕ್ಕೆ ಬೆಂಕಿ: ಇನ್ನೂ 25 ನಾಗರಿಕರ ಕಣ್ಮರೆ
ಅಣ್ವಸ್ತ್ರ ಪರಿಕ್ಷೆ ಭಾರತದ ಹಕ್ಕು: ಪ್ರಧಾನಿ