ಆಗಸ್ಟ್ 15 ರಂದು 60ನೇ ಸ್ವತಂತ್ರ ದಿನಾಚರಣೆಯನ್ನು ಆಚರಿಸುತ್ತಿರುವ ಪ್ರಯುಕ್ತ ರಾಜಧಾನಿ ನವದೆಹಲಿ ಒಳಗೊಂಡಂತೆ ದೇಶದ ಇತರ ಪ್ರಮುಖ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳು ಒಳಗೊಂಡಂತೆ ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
17ನೇ ಶತಮಾನದ ಐತಿಹಾಸಿಕ ಕೆಂಪು ಕೋಟೆಯ ಮೇಲೆ ಪ್ರಧಾನಿ ಮನಮೋಹನ್ ಸಿಂಗ್ ಅವರು ತ್ರಿವರ್ಣ ಧ್ವಜವನ್ನು ಹಾರಿಸಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಈ ಪ್ರದೇಶದ ಸುತ್ತಮುತ್ತ ಯಾವುದೇ ವಿಮಾನಗಳ ಹಾರಾಟವನ್ನು ನಿಷೇಧ ಮಾಡಲಾಗಿದೆ.
ಭಯೋತ್ಪಾದಕರ ಆತಂಕದಿಂದಾಗಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ಬುಧವಾರ ಪೂರ್ಣ ಒಂದು ದಿನದವರೆಗೆ ವಾಯು ಮಾರ್ಗದಲ್ಲಿ ಸಂಚಾರ ನಡೆಸಲಿವೆ.
ಸೋಮವಾರದ ಪೂರ್ಣ ಸಿದ್ದತೆಯ ತಾಲೀಮಿನಲ್ಲಿ ಯಾವ ರೀತಿ ಭದ್ರತೆ ಏರ್ಪಡಿಸಲಾಗಿದೆ ಎಂಬುವುದನ್ನು ದೆಹಲಿ ಪೋಲಿಸರು ಹಾಗೂ ಇತರ ಏಜೆನ್ಸಿಗಳು ಎಚ್ಚರಿಕೆ ವಹಿಸಿದವು.
ದೆಹಲಿಯ ಸುತ್ತಮುತ್ತಲೂ ಸುಮಾರು 10,500 ಅರೆ ಸೇನಾಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಕಳೆದ ವರ್ಷಕ್ಕಿಂತಲೂ ಈ ಬಾರಿ 500 ಮಂದಿಯನ್ನು ಅಧಿಕಗೊಳಿಸಲಾಗಿದೆ.
'ಇದುವರೆಗೆ ಯಾವುದೇ ಆತಂಕ ಪಡೆದಿಲ್ಲ. ಆದರೆ, ರಾಷ್ಟ್ರದ ಯಾವುದೇ ನಾಯಕರು ಹಾಗೂ ಪ್ರಮುಖ ಸ್ಥಳಗಳ ಮೇಲೆ ಆತಂಕವಾದಿಗಳ ದಾಳಿ ಮಾಡುವುದಕ್ಕೆ ಯಾವ ಅವಕಾಶವನ್ನು ನೀಡುವುದಿಲ್ಲ. ಈ ನಿಟ್ಟಿನಲ್ಲಿ ಗುಪ್ತಚರಗಳು ನಮಗೆ ಮಾಹಿತಿ ನೀಡುತ್ತಲೇ ಇವೆ' ಎಂದು ವಿಶೇಷ ಪೋಲಿಸ್ ಆಯುಕ್ತ (ಭದ್ರತೆ) ಎಸ್.ಬಿ.ಡಿಯೋಲ್ ಸುದ್ದಿಗಾರರಿಗೆ ತಿಳಿಸಿದರು.
|