ಶಿಮ್ಲಾ- ರಾಮ್‌ಪುರ ಉಪವಿಭಾಗದಲ್ಲಿ ಘಾನ್ವಿಯಲ್ಲಿ ಐದು ಮೃತದೇಹಗಳು ಪತ್ತೆಯಾಗಿವೆ. ಬುಧವಾರ ಸುರಿದ ಧಾರಾಕಾರ ಮಳೆಯಿಂದ ಉಂಟಾದ ಪ್ರವಾಹದಲ್ಲಿ 65 ಜನರು ಕೊಚ್ಚಿಕೊಂಡು ಹೋಗಿದ್ದಾರೆಂದು ಶಂಕಿಸಲಾಗಿದೆ.
ಪ್ರವಾಹದ ಮಟ್ಟ ಇಳಿದ ನಂತರ ಕೈಗೊಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಐವರ ಮೃತದೇಹಗಳು ಪತ್ತೆಯಾಗಿವೆ. ಸತ್ತವರಲ್ಲಿ ಬಹುತೇಕ ಮಂದಿ ಘಾನ್ವಿ ವಿದ್ಯುಚ್ಛಕ್ತಿ ಯೋಜನೆಯ ಕಾರ್ಮಿಕರೆಂದು ಶಂಕಿಸಲಾಗಿದೆ.
50 ಮನೆಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು, 60 ಮನೆಗಳಿಗೆ ಆಂಶಿಕ ಹಾನಿಯಾಗಿದೆ.
|