ವಾಘಾ- ಭಾರತ-ಪಾಕಿಸ್ತಾನದ ವಾಘಾ ಗಡಿಯ ಜಂಟಿ ಚೌಕಿಯಲ್ಲಿ ಮಧ್ಯರಾತ್ರಿ 12 ಗಂಟೆಯ ಸಮಯ. ನೀರವ ಮೌನವನ್ನು ಮುರಿದ ಭಾರತ-ಪಾಕಿಸ್ತಾನದ ಶಾಂತಿಪ್ರಿಯರು ಪರಸ್ಪರ ಕೈಜೋಡಿಸಿ 'ಭಾರತ-ಪಾಕ್ ದೋಸ್ತಿ ಜಿಂದಾಬಾದ್' ಎಂಬ ಘೋಷಣೆ ಕೂಗಿದರು.
ಉಭಯ ರಾಷ್ಟ್ರಗಳ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ನೇಹ ಮತ್ತು ಪ್ರೀತಿಯ ಬೆಸುಗೆಯನ್ನು ಪ್ರದರ್ಶಿಸಿದರು. ನೆರೆಹೊರೆಯ ಎರಡು ರಾಷ್ಟ್ರಗಳ ನಡುವೆ ದ್ವೇಷಕ್ಕೆ ತೆರೆ ಎಳೆಯಬೇಕೆಂದು ಕರೆ ನೀಡಿದರು. ಉರಿಯುತ್ತಿದ್ದ ಮೊಂಬತ್ತಿಗಳನ್ನು ಹಿಡಿದಿದ್ದ ಅವರು ಉಭಯ ರಾಷ್ಟ್ರಗಳಿಗೆ ಸೇರಿದ ಪಂಜಾಬಿನ ನಡುವೆ ಇರುವ ಬಲವಾದ ಸಾಂಸ್ಕೃತಿಕ ಬಾಂಧವ್ಯವನ್ನು ಕುರಿತು ಮಾತನಾಡಿದರು.
"ಯೆ ಪಂಜಾಬ್ ಬಿ ಮೇರಾ ಪೈ, ವೊ ಪಂಜಾಬ್ ವಬಿ ಮೇರಾ ಪೈ" ಎಂಬ ಪಂಜಾಬಿನ ಜನಪ್ರಿಯ ಗೀತೆ ಪೂರ್ವ ಮತ್ತು ಪಶ್ಚಿಮ ಪಂಜಾಬನ್ನು ಈಗಲೂ ಬಂಧಿಸಿರುವ ಸಾಂಸ್ಕೃತಿಕ ಬೆಸುಗೆಯನ್ನು ಉಲ್ಲೇಖಿಸುತ್ತದೆ.
|