ಭಾರತ ಮತ್ತು ಅಮೆರಿಕ ನಡುವೆ ನಾಗರಿಕ ಅಣು ಒಪ್ಪಂದ ಜಾರಿಗೆ ಬರುವವರೆಗೆ, ಭಾರತದ ನ್ಯೂಕ್ಲಿಯರ್ ಪಾವರ್ ಪ್ಲಾಂಟ್‌ಗಳಿಗೆ ತನ್ನ ದೇಶದಿಂದ ಯುರೇನಿಯಂನ್ನು ಸರಬರಾಜು ಮಾಡಲಿಕ್ಕಾಗುವುದಿಲ್ಲ ಎಂದು ಆಸ್ಟ್ರೇಲಿಯ ಹೇಳಿದೆ.
ಆಸ್ಟ್ರೇಲಿಯದ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಡೌನರ್ "ಭಾರತಕ್ಕೆ ರಪ್ತು ಮಾಡಬೇಕಾಗಿದ್ದ ಯುರೇನಿಯಂನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದ್ದು, ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದಕ್ಕ ಸಹಿ ಹಾಕಿದ ನಂತರ ಯುರೇನಿಯಂ ರಪ್ತು ಮಾಡಲಾಗುವುದು ಎಂದು ಹೇಳಿದೆ.
ಮಂಗಳವಾರದಂದು ಆಸ್ಟ್ರೇಲಿಯದ ರಕ್ಷಣಾ ಸಮಿತಿಯು ಉಪಖಂಡಕ್ಕೆ ಯುರೇನಿಯಂ ಇಂಧನವನ್ನು ರಪ್ತು ಮಾಡಲು ಅನುಮತಿ ನೀಡಿತ್ತು. ಅಮೆರಿಕದ ಗೃಹ ಇಲಾಖೆ, ಭಾರತದ ಅಣ್ವಸ್ತ್ರ ಪರೀಕ್ಷೆಗೆ ಸಂಬಂಧಿಸಿದಂತೆ ಒಪ್ಪಂದದಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದರಿಂದ, ಆಸ್ಟ್ರೇಲಿಯದ ಸರಕಾರ ಕೂಡ ತನ್ನ ನಿರ್ಧಾರ ಬದಲಿಸಿದೆ. ಭಾರತ ಮತ್ತು ಅಮೆರಿಕ ನಡುವಿನ ಒಪ್ಪಂದ ಜಾರಿಗೆ ಬರುವುದನ್ನು ನಾವು ಕಾಯುತ್ತಿದ್ದೆವೆ ಎಂದು ಪ್ರಕಟಣೆಯಲ್ಲಿ ಅದು ಹೇಳಿದೆ.
ಕ್ಯಾನಬೆರಾದಲ್ಲಿ ಆಸ್ಟ್ರೇಲಿಯ ಸಂಸತ್ತಿನ ವಿರೋಧ ಪಕ್ಷವು. ಭಾರತಕ್ಕೆ ಯುರೇನಿಯಂ ಮಾರಾಟದ ನಿರ್ಧಾರವನ್ನು ಪುನಃ ಪರಿಶೀಲಿಸಬೇಕು ಎಂದು ಒತ್ತಾಯ ಮಾಡಿದೆ. ಭಾರತ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕದೆ ಇರುವುದರಿಂದ ಆ ದೇಶದ ಸರಕಾರವು ಭವಿಷ್ಯತ್ತಿನ ದಿನಗಳಲ್ಲಿ ಅಣ್ವಸ್ತ್ರ ಪರೀಕ್ಷೆಯನ್ನು ಕೈಗೊಳ್ಳಬಹುದು.
ಆಸ್ಟ್ರೇಲಿಯ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿಹಾಕಿದೆ. ನಾಗರಿಕ ಅಣು ಶಕ್ತಿ ಉತ್ಪಾದನೆಗೆ ಬಳಕೆಯಾಗಬಹುದಾದ ಯುರೇನಿಯಂನ್ನು ಭಾರತ ತನ್ನ ಮಿಲಿಟರಿ ಉದ್ದೇಶಗಳಿಗಾಗಿ ಬಳಸುವುದನ್ನು ತಳ್ಳಿ ಹಾಕುವಂತಿಲ್ಲ ಆದ್ದರಿಂದ ತೆಗೆದುಕೊಂಡಿರುವ ರಪ್ತು ನಿರ್ಧಾರವನ್ನು ಪರಿಶೀಲಿಸಬೇಕು ಎಂದು ವಿರೋಧ ಪಕ್ಷದ ವಕ್ತಾರ ರಾಬರ್ಟ್ ಮ್ಯಾಕ್ ಕ್ಲೆಲ್ಯಾಂಡ್ ಹೇಳಿದ್ದಾರೆ.
|