ಪಟ್ನಾದಲ್ಲಿ ರೈಲಿನ ಮೂಲಕ ಪ್ರಯಾಣಿಸುತ್ತಿದ್ದ ಬಿಹಾರ್ ರಾಜ್ಯದ ಓರ್ವ ನ್ಯಾಯಾಧೀಶರ ಮಗಳು ಕಾಣೆಯಾಗಿದ್ದಾಳೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಾಂಕಾ ಜಿಲ್ಲೆಯ ಜಿಲ್ಲಾ ನ್ಯಾಯಾಧೀಶರಾದ ಸುಭಾಷ್ ಚಂದ್ರ ಅವರ ವಿವಾಹಿತ ಮಗಳು ರಾಣಿ ಅರ್ಚನಾ ಸಿಂಗ್ ವೆಸ್ಟ್ ಬೆಂಗಾಲ್‌ನ ನ್ಯೂ ಜಲಪೈಗುರಿಯಿಂದ ಪಟ್ನಾಗೆ ಆಗಮಿಸುತ್ತಿರುವಾಗ ಕಾಣೆಯಾಗಿದ್ದಾಳೆಂದು ರೈಲ್ವೆ ಪೊಲೀಸ್ ಸೂಪರಿಟೆಂಡೆಂಟ್ ಅಜಿತಾಭ್ ಕುಮಾರ್ ತಿಳಿಸಿದ್ದಾರೆ.
ರಾಣಿ ಅರ್ಚನಾ ಸಿಂಗ್ ಕಳೆದ ಏಪ್ರಿಲ್ ತಿಂಗಳಿನಲ್ಲಿ ರಾಜೀವಕುಮಾರ್ ಅವರೊಂದಿಗೆ ವಿವಾಹವಾಗಿದ್ದು, ಪತಿಯೊಂದಿಗೆ ಅಗಸ್ಟ್ 10 ರಂದು ದಾರ್ಜಿಲಿಂಗ್ ಪ್ರವಾಸಕ್ಕೆ ತೆರಳಿದ್ದು, ಸ್ಲೀಪರ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಅವರು ಮರಳಿ ಬರುವಾಗ ಈ ದುರ್ಘಟನೆ ಸಂಭವಿಸಿದೆ.
ರಾಣಿ ಅರ್ಚನಾ ಅವರ ಪತಿ ರಾಜೀವ್ ಕುಮಾರ್ ಮೋಕಮಾದಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
|