ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಅಮರ್‌ನಾಥ ಯಾತ್ರೆ ಪುನರಾರಂಭ
ಹವಾಮಾನ ವೈಪರೀತ್ಯದಿಂದಾಗಿ ಕಳೆದ ಎರಡು ದಿನಗಳಿಂದ ರದ್ದಾಗಿದ್ದ ಅಮರ್‌ನಾಥ್ ಯಾತ್ರೆ ಪುನರಾರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

577 ಜನರನ್ನು ಹೊಂದಿದ ಪ್ರಥಮ ತಂಡ ದಕ್ಷಿಣ ಕಾಶ್ಮಿರದ ಹಿಮಾಲಯದಲ್ಲಿರುವ ಅಮರ್‌ನಾಥ್ ಯಾತ್ರೆಗೆ ಹಸಿರು ನಿಶಾನೆ ದೊರೆತಿದೆ. 577 ಮಂದಿ ಯಾತ್ರಿಕರಲ್ಲಿ 331 ಪುರುಷರು, 127 ಮಹಿಳೆಯರು, 25 ಮಕ್ಕಳು 94 ಮಂದಿ ಸಾಧುಗಳು ಭಾರಿ ಭದ್ರತೆಯ ಮಧ್ಯೆ ಮಾಮ್ ಬೇಸ್ ಕ್ಯಾಂಪನಿಂದ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಉಧಾಂಪುರ್ ಜಿಲ್ಲೆಯ ಕುದ್ ಪ್ರದೇಶವನ್ನು ತಲುಪಿದ್ದು, ಪಹಲ್‌ಗಾಮ್ ಹಾಗೂ ಬಲ್ತಾಲ್ ಪ್ರದೇಶಕ್ಕೆ ಇಂದು ಸಂಜೆಯವರೆಗೆ ತಲುಪಬಹುದು ಎಂದು ಮೂಲಗಳು ತಿಳಿಸಿವೆ.

ಕಳೆದ ಎರಡು ತಿಂಗಳಿನಿಂದ ಆರಂಭವಾದ ಅಮರನಾಥ ಯಾತ್ರೆಯಲ್ಲಿ ಇದು 43 ನೇಯ ತಂಡವಾಗಿದ್ದು, ರಕ್ಷಾ ಬಂಧನದಂದು ಅಮರ್‌ನಾಥ್‌ ಯಾತ್ರೆಗೆ ಅಂತಿಮ ತೆರೆ ಬೀಳಲಿದೆ.

ಜುಲೈ ತಿಂಗಳಲ್ಲಿ ಆರಂಭವಾದ ಅಮರ್‌ನಾಥ್ ಯಾತ್ರೆಗೆ ಒಟ್ಟು ಇಲ್ಲಿಯವರೆಗೆ 55,113 ಯಾತ್ರಿಗಳು ಅಮರ್‌ನಾಥ್‌ ದರ್ಶನ ಪಡೆದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಮತ್ತಷ್ಟು
ಬಿಹಾರ್ ನ್ಯಾಯಾಧೀಶರ ಮಗಳು ನಾಪತ್ತೆ
ನೆನೆಗುದಿಗೆ ಬಿದ್ದ ಇಂಡೊ-ಆಸಿಸ್ ಅಣು ಒಪ್ಪಂದ
ಲಕ್ನೋದಿಂದ ಮೈಸೂರಿಗೆ ಬರುತ್ತಿದ್ದ "ಖುಷಿ" ಗಾಯಾಳು
ವಾಘಾ ಗಡಿಯಲ್ಲಿ ಸ್ನೇಹದ ಬೆಸುಗೆ
ಹಿಮಾಚಲ ಪ್ರದೇಶ:ಐದು ಮೃತದೇಹಗಳು ಪತ್ತೆ
ಸಿಆರ್‌ಪಿಎಫ್‌ ಯೋಧನಿಗೆ ತೀವ್ರ ಗಾಯ