ಪ್ರಕ್ಷುಬ್ಧ ಈಶಾನ್ಯ ಪ್ರದೇಶದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟಗಳ ನಡುವೆ, ಬಹು ಸ್ತರದ ಭದ್ರತಾ ರಕ್ಷಣೆಯಲ್ಲಿ ಸುತ್ತುವರಿದ ರಾಷ್ಟ್ರ ಬುಧವಾರ ತನ್ನ ಸ್ವಾತಂತ್ರ್ಯದ 60ನೇ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿತು. ರಾಷ್ಟ್ರದ ನಾಯಕರು ಜನಸಮುದಾಯಕ್ಕೆ ಅಭಿವೃದ್ಧಿ ಯೋಜನೆಗಳನ್ನು ಪ್ರಕಟಿಸಿ ನವ ಭಾರತದ ನಿರ್ಮಾಣಕ್ಕೆ ಪಣ ತೊಟ್ಟರು. ಅಸ್ಸಾಂನ ದುಬ್ರಿ ಮತ್ತು ಬೊಂಗಾಯ್‌ಗಾವ್ ಜಲ್ಲೆಗಳಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭಗಳು ನಡೆಯುವ ಸ್ಥಳದ ಸಮೀಪದಲ್ಲೇ ನಿಷೇಧಿತ ಉಲ್ಫಾ ಉಗ್ರಗಾಮಿಗಳು ನಾಲ್ಕು ಬಾಂಬ್‌ಗಳನ್ನು ಸ್ಫೋಟಿಸಿದ್ದರಿಂದ ಇಬ್ಬರು ಗಾಯಗೊಂಡರು. ಹಿಂಸೆಯನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಸೇರುವಂತೆ ರಾಷ್ಟ್ರನಾಯಕರು ಬಂಡುಕೋರರಿಗೆ ಮನವಿ ಮಾಡಿಕೊಂಡರು.
ಸ್ವಾತಂತ್ರ್ಯೋತ್ಸವ ಸಮಾರಂಭಗಳು ನಡೆಯುವ ಕೆಲವೇ ಗಂಟೆಗಳ ಮುಂಚೆ ಸಿಬ್ಸಾಗರ್ ಜಿಲ್ಲೆಯ ಅರಣ್ಯದೊಳಗಿದ್ದ ಉಲ್ಝಾ ಶಿಬಿರದಲ್ಲಿ ಅಪಾರ ಪ್ರಮಾಣದ ಶಸ್ತ್ರಗಳು ಮತ್ತು ಸ್ಫೋಟಕಗಳು ಪತ್ತೆಯಾಗಿವೆ. ಸ್ವಾತಂತ್ರ್ಯೋತ್ಸವ ಬಹಿಷ್ಕರಿಸಲು ಉಗ್ರಗಾಮಿಗಳು ನೀಡಿದ್ದ ಕರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.
|