ನಮ್ಮ ವ್ಯವಸ್ಥೆಯ ಮೇಲೆ ಭ್ರಷ್ಟಾಚಾರವು ಗಂಭೀರ ಸವಾಲನ್ನು ಒಡ್ಡಿದ್ದು, ಈ ಪಿಡುಗನ್ನು ರಾಷ್ಟ್ರ ದೃಢಸಂಕಲ್ಪದಿಂದ ಎದುರಿಸುವ ಕಾಲ ಕೂಡಿಬಂದಿದೆ ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಬುಧವಾರ ತಿಳಿಸಿದರು.
ಸಂಸತ್ತಿನ ಕೇಂದ್ರ ಭವನದಲ್ಲಿ ರಾಷ್ಟ್ರದ ಸ್ವಾತಂತ್ರ್ಯದ 60ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.ದೇಶದ ಸಮಗ್ರ ಬೆಳವಣಿಗೆಯ ಅಗತ್ಯದ ಬಗ್ಗೆ ಮಾತನಾಡಿದ ಅವರು, ಶಿಕ್ಷಣವನ್ನು ಮಹತ್ವದ ಕ್ಷೇತ್ರವನ್ನಾಗಿ ಮಾಡುವ ಬಗ್ಗೆ ಒಲವು ವ್ಯಕ್ತಪಡಿಸಿದರು. ಸಮೃದ್ಧ ಮತ್ತು ಯಶಸ್ವಿ ಭಾರತ ನಿರ್ಮಾಣಕ್ಕೆ ಶಿಕ್ಷಣ ಕೀಲಿಕೈಯಾಗಿದೆ ಎಂದು ಬಣ್ಣಿಸಿದರು.
ಸಂಸತ್ತು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಭವನವಾಗಿದ್ದು ಜನತೆಯ ಇಚ್ಛೆಯನ್ನು ಪ್ರತಿನಿಧಿಸುತ್ತದೆ .ಆದ್ದರಿಂದ ಜನತೆಯ ಆಕಾಂಕ್ಷೆಗಳನ್ನು ದಕ್ಷತೆಯಿಂದ ನಿರ್ವಹಿಸುವುದು ಸಂಸತ್ ಸದಸ್ಯರ ಕರ್ತವ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
|