ಕೇರಳ-ಇಲ್ಲಿನ ಚೆಟ್ಟುವಾ ಬಳಿ ಆನೆಯೊಂದು ತನ್ನ ಮಾವುತನನ್ನು ಕೊಂದು ಇನ್ನೊಬ್ಬನನ್ನು ತೀವ್ರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ.
ಗುರುವಾಯೂರು ದೇವಸ್ವ ಮಂಡಳಿ ಮಾಲೀಕತ್ವದ ಆನೆ ಕೀರ್ತಿಯನ್ನು ಚೆಟ್ಟುವಾದ ದೇವಸ್ಥಾನದಲ್ಲಿ ಆನೆಗಳಿಗೆ ಆಹಾರ ಉಣಿಸುವ ಸಮಾರಂಭ 'ಅನಾಯೂತ್'ಗೆ ಕರೆತಂದಾಗ ಅದು ಮಾವುತ ಗೋಪಾಲಕೃಷ್ಣನ ಮೇಲೆ ದಾಳಿ ಮಾಡಿ ಕೊಂದಿತು.
ಸಮಾರಂಭ ನಡೆಯುವಾಗ ಕೂಡ ಆನೆ ಬೇಗುದಿಯ ಸ್ಥಿತಿಯಲ್ಲಿದ್ದು, ಇನ್ನೊಬ್ಬ ಮಾವುತ ಸದಾಶಿವನ್ ಎಂಬವನ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಬಳಿಕ ಮಾವುತರ ತಂಡವೊಂದು ಆನೆಯನ್ನು ಹತೋಟಿಗೆ ತಂದರು.
|