ಭಾರತ-ಅಮೆರಿಕ ಪರಮಾಣು ಒಪ್ಪಂದ ಕುರಿತಂತೆ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಯುಪಿಎ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುವುದಿಲ್ಲ ಎಂದು ಸಿಪಿಎಂ ಘೋಷಿಸುವ ಮೂಲಕ ಕವಿದಿದ್ದ ಆತಂಕ ದೂರವಾಗಿದೆ.
"ಸರ್ಕಾರವನ್ನು ಉರುಳಿಸುವುದು ನಮ್ಮ ನೀತಿಯಲ್ಲ. ಬದಲಿಗೆ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿಲ್ಲದ ಸರ್ಕಾರದ ನೀತಿಗಳಲ್ಲಿ ಬದಲಾವಣೆ ತರುವುದು ನಮ್ಮ ಕೆಲಸ" ಎಂದು ಎಡರಂಗ ಪಶ್ಚಿಮಬಂಗಾಳ ಘಟಕದ ಅಧ್ಯಕ್ಷ ಮತ್ತು ಸಿಪಿಎಂನ ರಾಜ್ಯ ಕಾರ್ಯದರ್ಶಿ ಬಿಮನ್ ಬೋಸ್ ತಿಳಿಸಿದ್ದಾರೆ.
ಸಿಪಿಎಂ ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆಯುವುದೇ ಎಂಬ ಪ್ರಶ್ನೆಗೆ "ಇದೊಂದು ವದಂತಿಯಾಗಿದ್ದು, ನಿಜವಾದ ಆಧಾರವಿಲ್ಲ"ಎಂದವರು ಪೇಳಿದರು.
|