ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪರಮಾಣು ಒಪ್ಪಂದ: ಅಂತಿಮ ರೂಪುರೇಷೆಗೆ ಸಿಪಿಎಂ ಸಭೆ
ಭಾರತ-ಅಮೆರಿಕ ಪರಮಾಣು ಒಪ್ಪಂದಕ್ಕೆ ಸಿಪಿಎಂ ವಿರೋಧ ಸೂಚಿಸಿರುವ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಕೈಗೊಳ್ಳುವ ಕಾರ್ಯತಂತ್ರದ ಬಗ್ಗೆ ಅಂತಿಮರೂಪುರೇಷೆ ನಿರ್ಧರಿಸಲು ಸಿಪಿಎಂನ ನಿರ್ಣಾಯಕ ಸಭೆ ಶುಕ್ರವಾರ ಇಲ್ಲಿ ಆರಂಭವಾಯಿತು.

ಪರಮಾಣು ಒಪ್ಪಂದವನ್ನು ತಾವು ತೀವ್ರವಾಗಿ ವಿರೋಧಿಸಿದರೂ, ತಮ್ಮ ಪಕ್ಷವು ಬಾಹ್ಯಬೆಂಬಲ ನೀಡುತ್ತಿರುವ ಯುಪಿಎ ಸರ್ಕಾರದ ಸ್ಥಿರತೆಗೆ ಧಕ್ಕೆ ಉಂಟುಮಾಡುವ ಉದ್ದೇಶವಿಲ್ಲ
ಎಂದು ಸಿಪಿಎಂನ ಕೆಲವು ಹಿರಿಯ ನಾಯಕರು ಈಗಾಗಲೇ ತಿಳಿಸಿದ್ದು, ಇದರ ಬೆನ್ನಹಿಂದೆಯೇ ಈ ಸಭೆ ನಡೆದಿದೆ.

ವಿದೇಶಾಂಗ ಮತ್ತು ಆರ್ಥಿಕ ನೀತಿಗಳ ಬಗ್ಗೆ ತೀವ್ರ ಭಿನ್ನಾಭಿಪ್ರಾಯಗಳಿರುವ ಹಿನ್ನೆಲೆಯಲ್ಲಿ ಸಮ್ಮಿಶ್ರ ಕೂಟದಿಂದ ರಾಜಕೀಯವಾಗಿ ದೂರ ಸರಿಯುವ ಮಾತುಗಳು ಎಡಪಕ್ಷಗಳ ಕೆಲವು ನಾಯಕರಿಂದ ಕೇಳಿಬರುತ್ತಿದೆ.

ಎರಡು ದಿನಗಳ ಪಾಲಿಟ್‌ಬ್ಯೂರೊ ಸಭೆಯಲ್ಲಿ ಸರ್ಕಾರದ ವಿದೇಶಾಂಗ ಮತ್ತು ಆರ್ಥಿಕ ನೀತಿಗಳ ವಿರುದ್ಧ ಪ್ರತಿಭಟನೆಗಳ ಸರಣಿಯನ್ನು ಯೋಜಿಸುವ ಸಂಭವವಿದೆ. ಬೆಲೆ ಏರಿಕೆ, ವ್ಯಾಪಕ ಕೋಮು ಘರ್ಷಣೆ, ಸರ್ಕಾರ ಭರವಸೆ ನೀಡಿದ್ದರೂ ಅನುಷ್ಠಾನಕ್ಕೆ ತರದ ಅಸಂಘಟಿತ ಮತ್ತು ಕೃಷಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕ್ರಮಗಳನ್ನು ಕೂಡ ಸಭೆಯಲ್ಲಿ ಚರ್ಚೆಗೆ ಎತ್ತಿಕೊಳ್ಳುವ ನಿರೀಕ್ಷೆಯಿದೆ.
ಮತ್ತಷ್ಟು
ಬಿಹಾರ, ಉ.ಪ್ರ. ದಲ್ಲಿ ಪ್ರವಾಹ ಸ್ಥಿತಿ ಗಂಭೀರ
ಸರ್ಕಾರಕ್ಕೆ ಸಿಪಿಎಂ ಬೆಂಬಲ ವಾಪಸಿಲ್ಲ
ಮುಂಚಿತವಾಗಿ ಕೈದಿಗಳ ಬಿಡುಗಡೆಗೆ ಸುಪ್ರೀಂಕೋರ್ಟ್ ತಡೆ
ಅಣ್ವಸ್ತ್ರ ಪರೀಕ್ಷೆ ನಡೆಸುವುದು ಸಾರ್ವಬೌಮ ಹಕ್ಕು
ಆನೆ ದಾಳಿಗೆ ಮಾವುತ ಬಲಿ
ದೃಢ ಸಂಕಲ್ಪದಿಂದ ಭ್ರಷ್ಟಾಚಾರ ಎದುರಿಸಲು ರಾಷ್ಟ್ರಪತಿ ಕರೆ