ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಬೆಂಬಲ ಹಿಂದೆಗೆತ ಇಲ್ಲ: ಬಸು ಸ್ಪಷ್ಟನೆ
ಕೋಲ್ಕತ್ತಾ-ಭಾರತ-ಅಮೆರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಯುಪಿಎ ಸರ್ಕಾರಕ್ಕೆ ಎಡಪಕ್ಷಗಳು ಬೆಂಬಲ ಹಿಂತೆಗೆದುಕೊಳ್ಳುವುದನ್ನು ಸಿಪಿಎಂನ ಹಿರಿಯ ಧುರೀಣ ಜ್ಯೋತಿಬಸು ಶುಕ್ರವಾರ ತಳ್ಳಿಹಾಕಿದ್ದಾರೆ.

ಬೆಂಬಲ ಹಿಂದೆಗೆತ ಅನಿವಾರ್ಯವೆಂದು ಕಾಣುತ್ತದೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಎ.ಬಿ. ಬರ್ಧನ್ ಎಚ್ಚರಿಕೆ ನೀಡಿರುವ ಬೆನ್ನ ಹಿಂದೆಯೇ ಬಸು ಹೇಳಿಕೆ ಹೊರಬಿದ್ದಿದೆ.

"ಭಾರತ-ಅಮೆರಿಕ ಪರಮಾಣು ಒಪ್ಪಂದದ ಸಾಧಕ-ಬಾಧಕಗಳನ್ನು ಕುರಿತಂತೆ ನಮ್ಮ ಪಕ್ಷದ ಪಾಲಿಟ್‌ಬ್ಯೂರೊ ಸಭೆಯಲ್ಲಿ ಚರ್ಚಿಸಲಾಗುತ್ತಿದ್ದು, ಅಲ್ಲಿ ಪಕ್ಷದ ನಿಲುವಿಗೆ ಅಂತಿಮ ರೂಪ ಸಿಗಲಿದೆ.

ಪರಮಾಣು ಒಪ್ಪಂದ ನಮಗೆ ಸಮಾಧಾನಕರವಾಗಿಲ್ಲ ಎಂದು ಈಗಾಗಲೇ ಹೇಳಿದ್ದೇವೆ. ಅದನ್ನೇ ಕಾರಣವಾಗಿಟ್ಟುಕೊಂಡು ಸರಕಾರ ಉರುಳಿಸುವ ಇಚ್ಛೆ ನಮಗಿಲ್ಲ. ಹಾಗೆ ಮಾಡಿದರೆ ಕೋಮುವಾದಿ ಬಿಜೆಪಿಗೆ ಅಧಿಕಾರದ ಗದ್ದುಗೆ ಹಿಡಿಯಲು ದಾರಿ ಕಲ್ಪಿಸಿದಂತಾಗುತ್ತದೆ" ಎಂದು 94 ವರ್ಷ ಪ್ರಾಯದ ಬಸು ಹೇಳಿದರು.

ಪರಮಾಣು ಒಪ್ಪಂದದ ವಿಷಯದ ಬಗ್ಗೆ ಮತದಾನ ನಡೆದರೆ ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಬಸು ಸ್ಪಷ್ಟಪಡಿಸಿದರು.
ಮತ್ತಷ್ಟು
ನಾಗರಿಕ ಅಣು ಒಪ್ಪಂದ ಬಿಕ್ಕಟ್ಟು
ಪರಮಾಣು ಒಪ್ಪಂದ: ಅಂತಿಮ ರೂಪುರೇಷೆಗೆ ಸಿಪಿಎಂ ಸಭೆ
ಬಿಹಾರ, ಉ.ಪ್ರ. ದಲ್ಲಿ ಪ್ರವಾಹ ಸ್ಥಿತಿ ಗಂಭೀರ
ಸರ್ಕಾರಕ್ಕೆ ಸಿಪಿಎಂ ಬೆಂಬಲ ವಾಪಸಿಲ್ಲ
ಮುಂಚಿತವಾಗಿ ಕೈದಿಗಳ ಬಿಡುಗಡೆಗೆ ಸುಪ್ರೀಂಕೋರ್ಟ್ ತಡೆ
ಅಣ್ವಸ್ತ್ರ ಪರೀಕ್ಷೆ ನಡೆಸುವುದು ಸಾರ್ವಬೌಮ ಹಕ್ಕು