ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸ್ಪೀಕರ್‌ಗೆ ಧನ್ಯವಾದ ಅರ್ಪಿಸಿದ ಫರ್ನಾಂಡಿಸ್
ಪ್ರಧಾನಿ ವಿರುದ್ಧ ತಾವು ನೀಡಿದ ಹೇಳಿಕೆಯಿಂದ ಸದನದಲ್ಲುಂಟಾದ ಪ್ರಕ್ಷುಬ್ದತೆಯನ್ನು ಸ್ಪೀಕರ್ ಸೋಮನಾಥ ಚಟರ್ಜಿ ನಿಭಾಯಿಸಿದ ರೀತಿಯ ಬಗ್ಗೆ ಎನ್‌ಡಿಎ ಸಂಚಾಲಕ ಜಾರ್ಜ್ ಫರ್ನಾಂಡಿಸ್ ಧನ್ಯವಾದ ಅರ್ಪಿಸಿದ್ದಾರೆ.

ಅಮೆರಿಕದ ಜತೆ 123 ಪರಮಾಣು ಒಪ್ಪಂದದ ಬಗ್ಗೆ ರಾಷ್ಟ್ರಕ್ಕೆ ಸುಳ್ಳು ಹೇಳಿ ವಂಚಿಸಿದ ಪ್ರಧಾನಿಯನ್ನು ಚೀನಾದಲ್ಲಾಗಿದ್ದರೆ ಗುಂಡು ಹೊಡೆದು ಕೊಲ್ಲುತ್ತಿದ್ದರು ಎಂದು ಫರ್ನಾಂಡಿಸ್ ಗುರುವಾರ ಹೇಳಿಕೆ ನೀಡಿದ್ದರು.

ಆಳುವ ಪಕ್ಷದ ಸದಸ್ಯರು ಎಬ್ಬಿಸಿದ ಗದ್ದಲವನ್ನು ನಿರ್ವಹಿಸಿದ ರೀತಿಗೆ ಸಭಾಧ್ಯಕ್ಷರಿಗೆ ಧನ್ಯವಾದ ಅರ್ಪಿಸಿ ಪತ್ರ ಬರೆದಿರುವ ಅವರು, ತಾವು ರಕ್ಷಣಾ ಸಚಿವರಾಗಿದ್ದಾಗ 6ವರ್ಷಗಳವರೆಗೆ ಸುಳ್ಳುಗಳಿಂದ ತುಂಬಿದ ಪ್ರಚಾರವನ್ನು ಎದುರಿಸಿದ್ದನ್ನು ಸ್ಮರಿಸಿದರು.

ಕಾಂಗ್ರೆಸ್ ಅಧ್ಯಕ್ಷೆ ತಮ್ಮ "ಶೌಟಿಂಗ್ ಬ್ರಿಗೇಡ್‌"ಗೆ "ಕಫಾನ್ ಚೋರ್ ಕುರ್ಸಿ ಚೋದ್" ಮುಂತಾದ ಘೋಷಣೆ ಕೂಗುವಂತೆ ಪ್ರಚೋದಿಸಿದರು. ತಾವು ಹೇಳುತ್ತಿರುವುದು ಸುಳ್ಳು ಎಂದು ತಿಳಿದಿದ್ದರೂ ಅದನ್ನು ಮುಂದುವರಿಸಿದರು.

ಈಗ ಪ್ರಧಾನಿ ವಿರುದ್ಧ "ಕೆರಳಿಸುವ ಹೇಳಿಕೆ"ಗೆ ಇದೇ ಜನರು ಕ್ಷಮಾಪಣೆ ಕೋರಲು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು,
ಮತ್ತಷ್ಟು
ಪ್ರಧಾನಿ ವಿರುದ್ಧ ಫರ್ನಾಂಡಿಸ್ ಟೀಕೆಗೆ ಖಂಡನೆ
ಬೆಂಬಲ ಹಿಂದೆಗೆತ ಇಲ್ಲ: ಬಸು ಸ್ಪಷ್ಟನೆ
ನಾಗರಿಕ ಅಣು ಒಪ್ಪಂದ ಬಿಕ್ಕಟ್ಟು
ಪರಮಾಣು ಒಪ್ಪಂದ: ಅಂತಿಮ ರೂಪುರೇಷೆಗೆ ಸಿಪಿಎಂ ಸಭೆ
ಬಿಹಾರ, ಉ.ಪ್ರ. ದಲ್ಲಿ ಪ್ರವಾಹ ಸ್ಥಿತಿ ಗಂಭೀರ
ಸರ್ಕಾರಕ್ಕೆ ಸಿಪಿಎಂ ಬೆಂಬಲ ವಾಪಸಿಲ್ಲ