ನಾಗರಿಕ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮನ್‌ಮೋಹನ್ ಸಿಂಗ್ ಮಾಡಿರುವ ಸುಳ್ಳು ಹೇಳಿಕೆಗಳನ್ನು, ಒಂದು ಪಕ್ಷ ಚೀನಾದ ನಾಯಕ ಮಾಡಿದ್ದರೆ ತಲೆ ಹೊಗುತ್ತಿತ್ತು ಎಂದು ಎನ್‌ಡಿಎ ಸಂಯೋಜಕ ಜಾರ್ಜ್ ಫರ್ನಾಂಡಿಸ್ ಹೇಳಿದ್ದಾರೆ.
ಐತಿಹಾಸಿಕ ಒಪ್ಪಂದ ಎರಡು ದೇಶಗಳ ನಡುವೆ ನಾಗರಿಕ ಅಣು ಒಪ್ಪಂದಕ್ಕೆ ದಾರಿ ಮಾಡಿಕೊಡುತ್ತದೆ. ಆದರೆ ಅಣು ಒಪ್ಪಂದ ಭಾರತದ ಅಣ್ವಸ್ತ್ರ ಕಾರ್ಯಕ್ರಮಕ್ಕೆ ಅಡ್ಡಿಮಾಡಲಿದೆ. ಎಕೆಂದರೆ ಅಮೆರಿಕದ ಕಾನೂನು ಇತರ ದೇಶಗಳ ಅಣ್ವಸ್ತ್ರ ಕಾರ್ಯಕ್ರಮವನ್ನು ಒಪ್ಪುವುದಿಲ್ಲ.
ಸರಕಾರದ ನಾಯಕನಾಗಿ ಮನ್‌ಮೋಹನ್ ಸಿಂಗ್ ಸತತವಾಗಿ ದೇಶದ ಎದುರು ಸುಳ್ಳು ಹೇಳುತ್ತ ದೇಶದ ನಾಗರಿಕರನ್ನು ದಾರಿ ತಪ್ಪಿಸುತ್ತ ದ್ರೋಹ ಎಸಗುತ್ತ ಬಂದಿದ್ದಾರೆ ಎಂದು ಮಾಜಿ ಕೇಂದ್ರ ರಕ್ಷಣಾ ಸಚಿವ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಬಹುಶಃ ಇತಹದೊಂದು ಸುಳ್ಳನ್ನು ಚೀನಾದಲ್ಲಿ ದೇಶದ ನಾಯಕನೊಬ್ಬ ಆಡಿದ್ದರೆ, ಒಂದು ಗುಂಡಿನಿಂದ ಸಮಸ್ಯೆ ಪರಿಹಾರವಾಗುತ್ತಿತ್ತು. ಅಮೆರಿಕದ ರಾಷ್ಟ್ರಾಧ್ಯಕ್ಷ ಇಂತಹ ಸುಳ್ಳು ಹೇಳುವುದಕ್ಕೆ ದೈರ್ಯ ಮಾಡಿದ್ದರೆ ಅಧಿಕಾರದಿಂದ ಕೆಳಗಿಳಿಯುತ್ತಿದ್ದ ಎಂದು ಹೇಳಿದ್ದಾರೆ.
|