ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಕ್ಷಮೆ ಕೇಳುವುದಿಲ್ಲ: ಫರ್ನಾಂಡಿಸ್
ಆಡಳಿತ ಪಕ್ಷ ಕಾಂಗ್ರೆಸ್‌ನಿಂದ ಭಾರಿ ವಿರೋಧವನ್ನು ಎದುರಿಸುತ್ತಿರುವ ಎನ್‌ಡಿಎ ಸಂಯೋಜಕ ಜಾರ್ಜ್ ಫರ್ನಾಂಡಿಸ್ ಅವರು, ತಾನು ಪ್ರಧಾನಿ ವಿರುದ್ದ ಮಾಡಿರುವ ಹೇಳಿಕೆಗಳಿಗೆ ಕ್ಷಮೆ ಕೇಳುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.

ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಅಣು ಒಪ್ಪಂದಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ದೇಶಕ್ಕೆ ಸತತವಾಗಿ ಸುಳ್ಳು ಹೇಳಿ ದ್ರೋಹ ಬಗೆದಿದ್ದಾರೆ ಈ ವಿಚಾರದಲ್ಲಿ ಕ್ಷಮೆ ಕೇಳುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಂಸತ್ತಿನಲ್ಲಿ ಜಾರ್ಜ್ ಹೇಳಿಕೆ ನಂತರ ಆಡಳಿತ ಕಾಂಗ್ರೆಸ್ ಪಕ್ಷದ ಸದಸ್ಯರು ಜಾರ್ಜ್ ಕ್ಷಮೆ ಕೋರಬೇಕೆಂದು ಒತ್ತಾಯಿಸಿ ಎರಡು ಬಾರಿ ಸದನದ ಕಲಾಪಕ್ಕೆ ಅಡ್ಡಿಯುಂಟು ಮಾಡಿದರು. ಈ ವಿಚಾರದಲ್ಲಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಅವರು, ಜಾರ್ಜ್ ತಮ್ಮ ಹೇಳಿಕೆಯನ್ನು ಸಂಸತ್ತಿನ ಹೊರಗೆ ಮಾಡಿರುವುದರಿಂದ, ಪ್ರಧಾನಿಯ ಕ್ಷಮೆ ಕೇಳುವಂತೆ ಅವರನ್ನು ಒತ್ತಾಯಿಸಲಿಕ್ಕೆ ಸಾಧ್ಯವಿಲ್ಲ. ಕ್ಷಮೆ ಕೇಳುವುದು ಬಿಡುವುದು ಜಾರ್ಜ್‌ಗೆ ಬಿಟ್ಟ ವಿಷಯ ಎಂದು ತಟಸ್ಥ ಧೋರಣೆ ಅನುಸರಿಸಿದ್ದಾರೆ.

ಸಂಸತ್ತಿನ ಕಲಾಪದ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಮಾಜಿ ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್, ನಾನು ಏಕೆ ಕ್ಷಮೆ ಕೇಳಬೇಕು. ನನ್ನ ಹೇಳಿಕೆಯಲ್ಲಿ ಪ್ರಧಾನಿ ಸುಳ್ಳು ಹೇಳಿದ್ದಾರೆ. ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಅಮೆರಿಕದ ರಾಷ್ಟ್ರಾಧ್ಯಕ್ಷನೊಬ್ಬ ಈ ರೀತಿ ಮಾಡಿದ್ದರೆ ಪದಚ್ಯುತಗೊಳ್ಳುತ್ತಿದ್ದ. ಚೀನಾ ನಾಯಕನೊರ್ವ ಈ ರೀತಿ ಮಾಡಿದ್ದರೆ ಸಾವು ಅವನಿಗಾಗಿ ಕಾಯುತ್ತಿತ್ತು.

ನನ್ನ ಹೇಳಿಕೆಯಲ್ಲಿ ಪ್ರಧಾನಿ ಬ್ರಷ್ಟ ಎಂದು ಹೇಳಿಲ್ಲ ಅದು ಮಾದ್ಯಮದ ಸೃಷ್ಟಿ ಎಂದು ಹೇಳಿದ್ದಾರೆ.
ಮತ್ತಷ್ಟು
ಪ್ರಧಾನಿ ಮಹಾ ಸುಳ್ಳುಗಾರ: ಜಾರ್ಜ್
ಸ್ಪೀಕರ್‌ಗೆ ಧನ್ಯವಾದ ಅರ್ಪಿಸಿದ ಫರ್ನಾಂಡಿಸ್
ಪ್ರಧಾನಿ ವಿರುದ್ಧ ಫರ್ನಾಂಡಿಸ್ ಟೀಕೆಗೆ ಖಂಡನೆ
ಬೆಂಬಲ ಹಿಂದೆಗೆತ ಇಲ್ಲ: ಬಸು ಸ್ಪಷ್ಟನೆ
ನಾಗರಿಕ ಅಣು ಒಪ್ಪಂದ ಬಿಕ್ಕಟ್ಟು
ಪರಮಾಣು ಒಪ್ಪಂದ: ಅಂತಿಮ ರೂಪುರೇಷೆಗೆ ಸಿಪಿಎಂ ಸಭೆ