ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಉಲ್ಬಣಿಸಿದ ಪ್ರವಾಹ: 318 ಮಂದಿ ಸಾವು
ಬಿಹಾರ್ ರಾಜ್ಯದಲ್ಲಿ ಉಲ್ಬಣಿಸುತ್ತಿರುವ ಪ್ರವಾಹದಿಂದಾಗಿ ಇಲ್ಲಿಯವರೆಗೆ 318 ಮಂದಿ ಸಾವನ್ನಪ್ಪಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ನದಿಗಳಾದ ಬುರಹಿ ಗಂಧಕ, ಭಾಗಮತಿ, ಕೋಸಿ, ಗಂಗಾ ನದಿಗಳು ಗರಿಷ್ಟ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಅನೇಕ ಮಂದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆಂದು ಮೂಲಗಳು ತಿಳಿಸಿವೆ.

ರಾಜ್ಯದ ಅನೇಕ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವುದರಿಂದ ಮುಂದಿನ 48 ಗಂಟೆಗಳಲ್ಲಿ ನದಿಯ ಪ್ರವಾಹ ನಿಯಂತ್ರಣಕ್ಕೆ ಬರುವ ಸಾಧ್ಯತೆಗಳಿಲ್ಲವೆಂದು ಕೇಂದ್ರ ಜಲ ಆಯೋಗ ತಿಳಿಸಿದೆ.

ಬಾಯಾ ಮತ್ತು ಗಂಗಾ ನದಿಗಳು ತುಂಬಿ ಹರಿಯುತ್ತಿದ್ದು, ಯಾವುದೇ ಕ್ಷಣದಲ್ಲಿ ಅಪಾಯ ತರುವ ಸಾಧ್ಯತೆಗಳಿರುವುದರಿಂದ ಜನರನ್ನು ಸ್ಥಳಾಂತರಗೊಳಿಸುವುದು ಅಗತ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದರಭಾಂಗ್ ಜಿಲ್ಲೆಯಲ್ಲಿ ಪ್ರವಾಹಕ್ಕೆ 61 ಮಂದಿ ಬಲಿಯಾಗಿದ್ದು, ಸಮಸ್ತಿಪುರದಲ್ಲಿ 55, ಈಸ್ಟ್ ಚಂಪರನ್ 51 ಮುಜಫರ್‌ಪುರ್ 49 ಮತ್ತು ಖಗಾರೀಯಾ ಜಿಲ್ಲೆಯಲ್ಲಿ 25 ಮಂದಿ ಸಾವನ್ನಪ್ಪಿದ್ದಾರೆ ಎಂದು ಸರಕಾರ ತಿಳಿಸಿದೆ.

ಪ್ರವಾಹದಿಂದಾಗಿ ರಾಜ್ಯದ ಸುಮಾರು 20 ಜಿಲ್ಲೆಗಳು, 7847 ಗ್ರಾಮಗಳಲ್ಲಿ 154 ಲಕ್ಷ ಮಂದಿ ತೊಂದರೆಗೆ ಸಿಲುಕಿದ್ದಾರೆ ಪ್ರವಾಹದಿಂದಾಗಿ ಸುಮಾರು 500 ಕೋಟಿಗೂ ಹೆಚ್ಚಿನ ಹಾನಿ ಸಂಭವಿಸಿದೆ.ಎಂದು ಮೂಲಗಳು ತಿಳಿಸಿವೆ.

ಭಾರತೀಯ ವಾಯು ಸೇನಾಪಡೆಯ ಹೆಲಿಕಾಪ್ಟರ್‌ಗಳು ಹಾಗೂ 6002 ದೋಣಿಗಳು ಜನರನ್ನು ಸುರಕ್ಷಿತವಾದ ಸ್ಥಳಗಳಿಗೆ ರವಾನಿಸಲು ನೆರವಾಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ನಾಗರಿಕ ಅಣು ಒಪ್ಪಂದ ಮರು ಮಾತುಕತೆ ಇಲ್ಲ: ಯುಎಸ್
ಕ್ಷಮೆ ಕೇಳುವುದಿಲ್ಲ: ಫರ್ನಾಂಡಿಸ್
ಪ್ರಧಾನಿ ಮಹಾ ಸುಳ್ಳುಗಾರ: ಜಾರ್ಜ್
ಸ್ಪೀಕರ್‌ಗೆ ಧನ್ಯವಾದ ಅರ್ಪಿಸಿದ ಫರ್ನಾಂಡಿಸ್
ಪ್ರಧಾನಿ ವಿರುದ್ಧ ಫರ್ನಾಂಡಿಸ್ ಟೀಕೆಗೆ ಖಂಡನೆ
ಬೆಂಬಲ ಹಿಂದೆಗೆತ ಇಲ್ಲ: ಬಸು ಸ್ಪಷ್ಟನೆ