ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಡಿಲಿಸದ ಎಡರಂಗದ ಬಿಗಿ ನಿಲುವು
ಪರಮಾಣು ಒಪ್ಪಂದದ ಬಗ್ಗೆ ಎಡಪಕ್ಷಗಳು ಬಿಗಿ ನಿಲುವನ್ನು ತಾಳಿರುವುದರಿಂದ ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರ ಸರ್ಕಾರ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಈ ವಿಷಯದ ಬಗ್ಗೆ ತಾವು ನಿಶ್ಚಲ ಒಗ್ಗಟ್ಟಿನಿಂದ ಇರುವುದಾಗಿ ಎಡರಂಗ ತಿಳಿಸಿದೆ.

ಸಿಪಿಎಂ ಪ್ರಧಾನಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರು ಪ್ರಧಾನಮಂತ್ರಿ ಮನಮೋಹನ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಶನಿವಾರ ಸಂಜೆ ಪ್ರಧಾನಿ ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದರು. ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ಮತ್ತು ಸಿಪಿಎಂ ಪಾಲಿಟ್‌ಬ್ಯೂರೊ ಸದಸ್ಯ ಸೀತಾರಾಂ ಯೆಚೂರಿ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಯುಪಿಎ-ಎಡರಂಗದ ಹಳಸಿದ ಸಂಬಂಧಕ್ಕೆ ತೇಪೆ ಹಾಕುವ ಕೊನೆಯ ಪ್ರಯತ್ನವೆಂದು ಈ ಭೇಟಿಯನ್ನು ಪರಿಗಣಿಸಲಾಗಿದೆ. ಭಾರತ-ಅಮೆರಿಕ ಪರಮಾಣು ಒಪ್ಪಂದಕ್ಕೆ ಎಡಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಮಧುರ ಸಂಬಂಧ ಹಳಸಿತ್ತು. ಯುಪಿಎ ಸರ್ಕಾರಕ್ಕೆ ತಮ್ಮ ನಿರ್ಣಾಯಕ ಬೆಂಬಲವನ್ನು ತಕ್ಷಣಕ್ಕೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಸಿಪಿಎಂ ಈಗಾಗಲೇ ತಿಳಿಸಿದ್ದರೂ, ಪರಮಾಣು ಒಪ್ಪಂದಕ್ಕೆ ತನ್ನ ವಿರೋಧದ ಬಗ್ಗೆ ಬಿಗಿ ನಿಲುವು ಹೊಂದಿದೆ. ಸರ್ಕಾರಕ್ಕೆ ಬೆಂಬಲವನ್ನು ಧೈರ್ಯವಿದ್ದರೆ ಹಿಂತೆಗೆದುಕೊಳ್ಳಿ ಎಂದು ಎಡರಂಗಕ್ಕೆ ಸವಾಲೆಸೆಯುವ ಮೂಲಕ ಯುಪಿಎ-ಎಡರಂಗದ ಸಂಬಂಧ ಹದಗೆಡಲು ಪ್ರಧಾನಿಯೇ ಕಾರಣ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಭೆಯ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾರಟ್, ಒಪ್ಪಂದವನ್ನು ಕಾರ್ಯಗತಗೊಳಿಸುವ ಮುಂದಿನ ಕ್ರಮಗಳಾದ ಐಎಇಎ ಮತ್ತು ಪರಮಾಣು ಇಂಧನ ಪೂರೈಸುವ ರಾಷ್ಟ್ರಗಳ ಜತೆ ಚರ್ಚೆಯನ್ನು ಸರ್ಕಾರ ನಡೆಸಬಾರದು ಎಂದು ತಿಳಿಸಿದ್ದಾರೆ.ಪರಮಾಣು ಒಪ್ಪಂದದ ಜಾರಿಯಿಂದ ಸರ್ಕಾರಕ್ಕೆ ಮತ್ತು ರಾಷ್ಟ್ರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆಂದು ತಾವು ಪ್ರಧಾನಿ ಮತ್ತು ಸೋನಿಯಾಗೆ ಎಚ್ಚರಿಸಿದ್ದಾಗಿ ಅವರು ಹೇಳಿದರು.
ಮತ್ತಷ್ಟು
ಪರಮಾಣು ಒಪ್ಪಂದ:ಪ್ರಧಾನಿ - ಯೆಚೂರಿ, ಕಾರಟ್ ಭೇಟಿ
ಕಟ್ಟಡ ಕುಸಿತ: ಅವಶೇಷಗಳಲ್ಲಿ ಸಿಕ್ಕಿಬಿದ್ದ ಐವರು
ಉಲ್ಬಣಿಸಿದ ಪ್ರವಾಹ: 318 ಮಂದಿ ಸಾವು
ನಾಗರಿಕ ಅಣು ಒಪ್ಪಂದ ಮರು ಮಾತುಕತೆ ಇಲ್ಲ: ಯುಎಸ್
ಕ್ಷಮೆ ಕೇಳುವುದಿಲ್ಲ: ಫರ್ನಾಂಡಿಸ್
ಪ್ರಧಾನಿ ಮಹಾ ಸುಳ್ಳುಗಾರ: ಜಾರ್ಜ್