ಗಂದಕ್ ನದಿ ಮಾರ್ಗ ಬದಲಾಗಿರುವುದರಿಂದ ತಾವು 5000 ಎಕರೆ ಭೂಮಿಯನ್ನು ಕಳೆದುಕೊಂಡಿರುವುದಾಗಿ ದೆಹಲಿ ಉಚ್ಚ ನ್ಯಾಯಾಲಯದ ಮುಂದೆ ಹೇಳಿರುವ ಕೇಂದ್ರ, ನೆರೆಯ ದೇಶದಿಂದ ಭಾರತಕ್ಕೆ ಭಾರೀ ಸಂಖ್ಯೆಯ ಮುಸ್ಲಿಮರ ವಲಸೆಯನ್ನು ತಳ್ಳಿ ಹಾಕಿದೆ.
"ನೇಪಾಳದಿಂದ ಭಾರತಕ್ಕೆ ಹಾಗೆಯೇ, ಉತ್ತರಾಂಚಲ್‌ನ ಚಂಪಾವತ್ ಜಿಲ್ಲೆ ಹಾಗೂ ತಾನಕ್‌ಪುರ್ ಮತ್ತು ಬನ್ವಾಸಗಳಲ್ಲಿ ಭಾರೀ ಸಂಖ್ಯೆಯ ಮುಸ್ಲಿಮರ ಪ್ರವೇಶವನ್ನು ಸೂಚಿಸುವ ಯಾವುದೇ ವರದಿಯೂ ಇಲ್ಲ" ಎಂದು ಗೃಹ ಸಚಿವಾಲಯ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.
ನೇಪಾಳದಲ್ಲಿನ ಹದಗೆಟ್ಟಿರುವ ಪರಿಸ್ಥಿತಿಯಿಂದಾಗಿ, ಬಹಳಷ್ಟು ನಾಗರಿಕರು ಸಮಸ್ಯೆ ತಾರಕಕ್ಕೇರಿದ ಸಮಯದಲ್ಲಿ ಭಾರತಕ್ಕೆ ಆಗಮಿಸಿದ್ದರು ಎಂದು ಸಚಿವಾಲಯ ಹೇಳಿದೆ.
"ಆದರೂ, 1950ರ ಈ ದೇಶಗಳ ನಡುವಿನ ಶಾಂತಿ ಮತ್ತು ಸ್ನೇಹ ಒಪ್ಪಂದದಿಂದಾಗಿ ಅವರನ್ನು ಅಕ್ರಮ ವಲಸಿಗರು ಎಂದು ಕರೆಯಲಾಗುವುದಿಲ್ಲ" ಎಂದು ಅದು ಹೇಳಿದೆ.
ನೇಪಾಳದ ನಿಯಂತ್ರಣದಲ್ಲಿರುವ ಬಿಹಾರ್‌ನ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿನ ಭಾರತೀಯ ಪ್ರದೇಶದ ವಿಶಾಲ ವ್ಯಾಪ್ತಿ ಹಾಗೂ ಗಡಿ ಜಿಲ್ಲೆಗಳಲ್ಲಿನ ಜನಸಂಖ್ಯೆಯನ್ನು ಆತಂಕಕ್ಕೊಳಪಡಿಸುವಂತೆ ಮುಸ್ಲಿಮರ ಅಕ್ರಮ ವಲಸೆ ನಡೆದಿದೆ ಎಂದು ಆರೋಪಿಸಿ ಬಂದಿರುವ ಅಹವಾಲಿಗೆ ಕೇಂದ್ರ ಉತ್ತರ ನೀಡುತ್ತಿತ್ತು.
|