ಭಾರತ-ಅಮೆರಿಕ ಪರಮಾಣು ಒಡಂಬಡಿಕೆ ಕುರಿತು ಎಡಪಕ್ಷಗಳು ಗಡುವು ನೀಡಿರುವುದರಿಂದಾಗಿ ತಲೆದೋರಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಲು ಯುಪಿಎ ನಾಯಕರು ಭಾನುವಾರ ಸಭೆ ಸೇರಲಿದ್ದಾರೆ.
ಕಾಂಗ್ರೆಸ್‌ನ ಪ್ರಮುಖ ಹೊರ ಬೆಂಬಲಿಗರಾದ ಎಡಪಕ್ಷಗಳು ತಾವು ಆಡಳಿತ ಪಕ್ಷದಿಂದ ಕನಿಷ್ಟವಾಗಿ ನಿರೀಕ್ಷಿಸುವುದು ಒಡಂಬಡಿಕೆಯನ್ನು ಕಾರ್ಯಗತಗೊಳಿಸುವುದನ್ನು ಸ್ಥಗಿತಗೊಳಿಸಬೇಕೆಂಬುದಾಗಿ ಹೇಳಿರುವುದರಿಂದ ತಲೆದೋರಿರುವ ಬಿಕ್ಕಟ್ಟನ್ನು ಬಗೆಹರಿಸುವ ಮಾರ್ಗವಾಗಿ ಪ್ರಮುಖ ನಾಯಕರು ಮಿತ್ರಪಕ್ಷಗಳೊಂದಿಗೆ ನಡೆಸಿದ ಸಮಾಲೋಚನೆಯ ಭಾಗವಾಗಿ ಈ ಸಭೆ ನಡೆಯಲಿದೆ. . ಎಡರಂಗದ ಗಡುವಿನ ನಂತರ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಪಕ್ಷದ ಮುಖ್ಯಸ್ಥೆ ಸೋನಿಯ ಗಾಂಧಿಯವರನ್ನು ಒಳಗೊಂಡಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಶನಿವಾರ 90 ನಿಮಿಷಗಳ ಕಾಲ ಕಾಂಗ್ರೆಸ್ ಕೋರ್ ಗ್ರೂಪ್‌ನ ಸಭೆಯಲ್ಲಿ ಚರ್ಚೆ ನಡೆಸಿದ್ದರು ಎನ್ನಲಾಗಿದೆ.
|