ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಎಡಪಕ್ಷಗಳ ಸಂತೈಸಲು ಕಾಂಗ್ರೆಸ್ ಹೊಸ ಪ್ರಸ್ತಾಪ
ಪರಮಾಣು ಒಪ್ಪಂದ ವಿಷಯಕ್ಕೆ ಸಂಬಂಧಿಸಿದಂತೆ ತಲೆದೋರಿರುವ ಬಿಕ್ಕಟ್ಟಿನಿಂದ ಆತಂಕಗೊಂಡಿರುವ ಕಾಂಗ್ರೆಸ್ ನೇತೃತ್ವದ ಯುಪಿಎ, ಎಡಪಕ್ಷಗಳ ಬೆದರಿಕೆಯಿಂದಾಗಿ ಸರಕಾರವನ್ನು ಹೇಗಾದರೂ ರಕ್ಷಿಸುವ ನಿಟ್ಟಿನಲ್ಲಿ ಭಾನುವಾರವಿಡೀ ಚರ್ಚಿಸಿ ಯೋಜನೆಯೊಂದನ್ನು ರೂಪಿಸಿದೆ ಎಂದು ಮೂಲಗಳು ಹೇಳಿವೆ.

ಯುಪಿಎಯ ಅನಿವಾರ್ಯ ಪತನ ಮತ್ತು ಚುನಾವಣೆಯ ಅನಿವಾರ್ಯತೆ ಕುರಿತು ಮಾತುಗಳು ಕೇಳಿಬರತೊಡಗಿರುವಂತೆಯೇ ಕೇಂದ್ರ ಸರಕಾರವು ಭಾನುವಾರ, ಎಡಪಕ್ಷಗಳ ಪ್ರತಿನಿಧಿಗಳು ಮತ್ತು ವಿಜ್ಞಾನಿಗಳನ್ನು ಒಳಗೊಂಡ ವಿಶೇಷ ಸಮಿತಿಯನ್ನು ರಚಿಸಿ, ಒಪ್ಪಂದದ ಪರಿಣಾಮಗಳನ್ನು ಅಧ್ಯಯನ ನಡೆಸುವ ಯೋಜನೆ ಹಾಕಿಕೊಂಡಿದೆ ಎಂದು ಹೇಳಲಾಗಿದೆ.

ಯುಪಿಎ-ಎಡಪಕ್ಷ ನಡುವಣ ತೀರಾ ಇತ್ತೀಚಿನ ಭಿನ್ನಾಭಿಪ್ರಾಯಕ್ಕೆ ಪ್ರಮುಖ ಕಾರಣವೆಂದರೆ 123 ಒಪ್ಪಂದದಡಿಯಲ್ಲಿ ಬರುವ ಜಲವಿದ್ಯುತ್ ಕಾಯ್ದೆಯ ನಿಬಂಧನೆಗಳು. ಈ ಕಾರಣಕ್ಕಾಗಿಯೇ ಎಡಪಕ್ಷಗಳು ಶನಿವಾರ, ಯುಪಿಎಯು ಒಂದೋ ಅಣ್ವಸ್ತ್ರ ಒಪ್ಪಂದವನ್ನು ತ್ಯಜಿಸಬೇಕು ಇಲ್ಲವೇ ತಮ್ಮ ಬೆಂಬಲ ಕಳೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದವು.

ಈಗಾಗಲೇ ಪ್ರತಿಪಕ್ಷಗಳ ಟೀಕಾ ಪ್ರಹಾರ ಮತ್ತು ಸವಾಲಿನಿಂದ ಇರಿಸುಮುರಿಸಿಗೊಳಗಾಗಿರುವ ಎಡಪಕ್ಷಗಳು ಇದೀಗ ಸರಕಾರ ಮುಂದಿಟ್ಟಿರುವ ಹೊಸ ಪ್ರಸ್ತಾಪವನ್ನು ಗಣನೆಗೆ ತೆಗೆದುಕೊಂಡಿದ್ದು, ಸೋಮವಾರ ಸಭೆ ಸೇರಿ ತಮ್ಮ ನಿರ್ಧಾರ ಪ್ರಕಟಿಸಲಿವೆ.

ಬಿಕ್ಕಟ್ಟಿನಿಂದ ಹತಾಶವಾಗಿರುವ ಕಾಂಗ್ರೆಸ್ ಪಕ್ಷದ ಉನ್ನತ ಸಮಿತಿಯು ಭಾನುವಾರ ಸಂಜೆ ಸಭೆ ಸೇರಿ ಈ ಪ್ರಸ್ತಾಪವನ್ನು ರೂಪಿಸಿತ್ತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ಈ ಉನ್ನತ ಸಮಿತಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ಹಿರಿಯ ಸಚಿವರಾ ಶಿವರಾಜ್ ಪಾಟೀಲ್, ಪ್ರಣಬ್ ಮುಖರ್ಜಿ, ಎ.ಕೆ.ಆಂಟನಿ ಮತ್ತು ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರು ಇದ್ದಾರೆ.
ಮತ್ತಷ್ಟು
ನಾಗರಿಕ ಪರಮಾಣು ಒಪ್ಪಂದ: ಸಭೆ
ಸಿಪಿಐ ನಾಯಕರ ಸಭೆ ನಿಗದಿ
ಮುಸ್ಲಿಮರ ವಲಸೆಯನ್ನು ತಳ್ಳಿ ಹಾಕಿದ ಸರಕಾರ
ಸಡಿಲಿಸದ ಎಡರಂಗದ ಬಿಗಿ ನಿಲುವು
ಪರಮಾಣು ಒಪ್ಪಂದ:ಪ್ರಧಾನಿ - ಯೆಚೂರಿ, ಕಾರಟ್ ಭೇಟಿ
ಕಟ್ಟಡ ಕುಸಿತ: ಅವಶೇಷಗಳಲ್ಲಿ ಸಿಕ್ಕಿಬಿದ್ದ ಐವರು