ಪಾಲ್ಕ್ ಜಲಸಂಧಿಯಲ್ಲಿ ಸೇತುಸಮುದ್ರಂ ಕಾಲುವೆ ಯೋಜನೆಗೆ ಹೂಳು ತೆಗೆಯುವುದರಿಂದ ಪರಿಸರದ ಮೇಲೆ ಯಾವುದೇ ಪ್ರಭಾವ ಖಚಿತವಾಗಿ ಬೀರುವುದಿಲ್ಲ ಎಂದು ಈ ಉದ್ದೇಶಕ್ಕಾಗಿ ರಚಿತವಾದ ಸಮಿತಿ ವಿಶ್ವಾಸ ವ್ಯಕ್ತಪಡಿಸಿದೆ.
ಈ ಯೋಜನೆಯಿಂದ ಪರಿಸರದ ಮೇಲಾಗುವ ಪ್ರಭಾವವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದು ಸಮಿತಿಯ ನೇತೃತ್ವ ವಹಿಸಿರುವ ಚೆನ್ನೈ ವಿ.ವಿ. ಕುಲಪತಿ ಡಾ. ರಾಮಚಂದ್ರನ್ ತಿಳಿಸಿದರು.
ಪಾಲ್ಕ್ ಜಲಸಂಧಿಯಲ್ಲಿ ಭಾರೀ ಖನಿಜಗಳ ನಿಕ್ಷೇಪವಿದೆಯೆಂಬ ವಾದವನ್ನು ಅವರು ತಳ್ಳಿಹಾಕಿದರು. ಜಲಗರ್ಭದಲ್ಲಿ ಮರಳು ಮತ್ತು ಸಣ್ಣಕಲ್ಲುಗಳಿವೆ ಎಂದು ಅವರು ಹೇಳಿದರು. ಹೂಳು ತೆಗೆಯುವ ಸ್ಥಳದಲ್ಲಿ ಭದ್ರ ವ್ಯವಸ್ಥೆ ಅಳವಡಿಸುವ ಮೂಲಕ ಹೂಳು ತೆಗೆಯುವುದರಿಂದ ಉಂಟಾಗುವ ಸಮಸ್ಯೆಗಳ ಅರಿವು ಉಂಟಾಗುತ್ತದೆ.
ಹೂಳು ತೆಗೆಯುವ ಸ್ಥಳದ ಬಳಿಯೇ ಮಣ್ಣನ್ನು ಹಾಕಲಾಗುತ್ತಿದೆ ಎಂಬ ವಾದವನ್ನು ಅವರು ನಿರಾಕರಿಸಿ, 14 ರಿಂದ 25 ಮೀಟರ್ ಆಳದ ಪ್ರದೇಶದಲ್ಲಿ ಹೂಳನ್ನು ತುಂಬಲಾಗುತ್ತಿದೆ ಎಂದು ಅವರು ಹೇಳಿದರು.
ಕಾಲುವೆ ಕಾಮಗಾರಿ ಅಂತ್ಯಗೊಂಡ ಬಳಿಕ ಪ್ರತಿ ತಿಂಗಳು 400 ನೌಕೆಗಳು ಅದನ್ನು ಬಳಸುತ್ತವೆ. ಸರ್ಕಾರಕ್ಕೆ ಪ್ರತಿದಿನ 15 ಸಾವಿರ ಡಾಲರ್ ಆದಾಯ ಸಿಗುತ್ತದೆ. ನೌಕಾ ಕಾಲುವೆ ಯೋಜನೆಯು 2008 ನವೆಂಬರ್‌ನೊಳಗೆ ಸಿಧ್ದಗೊಳ್ಳಲಿದೆ ಎಂದು ರಾಮಚಂದ್ರನ್ ತಿಳಿಸಿದರು.
|