ದೇಶದ ವಿದೇಶಿ ವಿನಿಮಯವನ್ನು ಕಬಳಿಸುತ್ತಿರುವ ತೈಲ ಆಮದು, ರಾಷ್ಟ್ರದ ಆರ್ಥಿಕ ವ್ಯವಸ್ಥೆಗೆ ಬಲವಾದ ಹೊಡೆತ ನೀಡುತ್ತಿದ್ದು, ಇದನ್ನು ತಡೆಗಟ್ಟಲು ಅಣು ವಿದ್ಯುತ್ ಶಕ್ತಿಯ ಉತ್ಪಾದನೆಯೊಂದೇ ಪರಿಹಾರ ಎಂದು ಪ್ರಧಾನಿ ಮನ್‌ಮೋಹನ್ ಸಿಂಗ್ ಹೇಳಿದರು.
ಭಾರತೀಯ ತೈಲ ಮತ್ತು ಇಂಧನ ನಿಗಮದ ನೂತನ ಕಟ್ಟಡದ ಶಂಕು ಸ್ಥಾಪನೆಯನ್ನು ನೇರವೇರಿಸಿ ಮಾತನಾಡುತ್ತಿದ್ದ ಪ್ರಧಾನಿ, ಡಾ ಮನ್‌ಮೋಹನ್ ಸಿಂಗ್, ದೇಶದ ತೈಲ ಬೇಡಿಕೆಗೆ ಹೋಲಿಸಿದಲ್ಲಿ ತೈಲ ಉತ್ಪಾದನೆ ಕಾಲು ಭಾಗ ಮಾತ್ರವಿದ್ದು, ಉಳಿದ ಬೇಡಿಕೆಯ ಪೂರೈಕೆಗಾಗಿ ತೈಲ ಕಂಪನಿಗಳು ಅನಿವಾರ್ಯವಾಗಿ ಕಚ್ಚಾ ತೈಲದ ಆಮದಿಗೆ ಮೊರೆ ಹೋಗಬೇಕಾಗಿದೆ.
ದೇಶದ ವಿದೇಶಿ ವಿನಿಮಯವನ್ನು ಸಂರಕ್ಷಿಸಬೇಕಾದರೆ ಸೌರಶಕ್ತಿ ಮತ್ತು ಅಣುಶಕ್ತಿ ಇಂಧನ ಉತ್ಪಾದನೆಗೆ ಒತ್ತು ನೀಡಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
|