ಭಾರತ ಅಮೆರಿಕ ಪರಮಾಣು ಒಪ್ಪಂದವನ್ನು ಅಧ್ಯಯನ ಮಾಡಲು ಸಂಸದೀಯ ಸಮಿತಿಯೊಂದನ್ನು ರಚಿಸಬೇಕೆಂದು ಎನ್‌ಡಿಎ ಪಕ್ಷ ಸರ್ಕಾರಕ್ಕೆ ಸೂಚಿಸಿದೆ. ಆದರೆ ಎಡಪಕ್ಷಗಳು ಧ್ವನಿಎತ್ತಿರುವ ಕಳವಳಗಳ ಪರಿಶೀಲನೆಗೆ ತಜ್ಞರ ತಂಡವನ್ನು ಸ್ಥಾಪಿಸಬೇಕೆಂಬ ಸಲಹೆಗೆ ಅದು ವಿರೋಧ ವ್ಯಕ್ತಪಡಿಸಿದೆ.
ಇದು ಯುಪಿಎ ಮತ್ತು ಎಡಪಕ್ಷಗಳ ಕುಟುಂಬ ವ್ಯವಹಾರವಲ್ಲ. ಇದು ಇಡೀ ರಾಷ್ಟ್ರಕ್ಕೆ ಸಂಬಂಧಿಸಿರುವ ವಿಷಯ.
ಆದ್ದರಿಂದ ಒಪ್ಪಂದದ ಅಧ್ಯಯನಕ್ಕೆ ಉಭಯ ಸದನಗಳನ್ನು ಒಳಗೊಂಡ ಸಂಸದೀಯ ವ್ಯವಸ್ಥೆಯೊಂದನ್ನು ಸ್ಥಾಪಿಸಬೇಕೆಂದು ಬಿಜೆಪಿ ನಾಯಕ ವಿ.ಕೆ. ಮಲ್ಹೋತ್ರಾ ಒತ್ತಾಯಿಸಿದರು.
ಎಡರಂಗ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪರಮಾಣು ಒಪ್ಪಂದದ ಬಗ್ಗೆ ಪ್ರಧಾನಿ ವಿಶೇಷ ಪ್ರತಿನಿಧಿಯಾದ ಶ್ಯಾಮ ಸರಣ್ ನೇತೃತ್ವದಲ್ಲಿ ತಜ್ಞರ ತಂಡವನ್ನು ಸರ್ಕಾರ ಸ್ಥಾಪಿಸಬಹುದೆಂಬ ವರದಿಗಳು ಬಂದ ಹಿನ್ನಲೆಯಲ್ಲಿ ಅವರ ಪ್ರತಿಕ್ರಿಯೆ ಹೊರಬಿದ್ದಿದೆ.
|