ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಪಾದಿತನಾಗಿರುವ ಬಾಲಿವುಡ್ ನಟ ಸಂಜಯ ದತ್ ಸೇರಿದಂತೆ ಐವರಿಗೆ ಸರ್ವೋಚ್ಚ ನ್ಯಾಯಾಲಯ ತಾಂತ್ರಿಕ ಕಾರಣದ, ಆಧಾರದ ಮೇಲೆ ಮಧ್ಯಂತರ ಜಾಮೀನು ನೀಡಿ ಆದೇಶ ಹೋರಡಿಸಿದೆ.
ಸಂಜಯದತ್ ಮತ್ತು ಇತರರಿಗೆ ಶಿಕ್ಷೆಯ ಆದೇಶ ಇನ್ನೂ ತಲುಪದಿರುವ ಕಾರಣ, ಸುಪ್ರೀಂ ಕೋರ್ಟ್ ಅಪಾದಿತರಿಗೆ ಜಾಮೀನು ನೀಡಿದ್ದು, ಶಿಕ್ಷೆಯ ಆದೇಶ ಪತ್ರ ತಲುಪಿದ ಕೂಡಲೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಿದೆ.
ಸಂಜಯದತ್ ಮತ್ತು ಇತರ ಐವರಿಗೆ ಟಾಡಾ ನ್ಯಾಯಾಲಯ ಇನ್ನೂ ಶಿಕ್ಷೆಯ ಆದೇಶ ಪತ್ರವನ್ನು ಜಾರಿ ಮಾಡಿಲ್ಲ. ಜಾಮೀನು ಅರ್ಜಿ ಸಲ್ಲಿಸಿದ್ದ ಸಂಜಯ ದತ್ ಮತ್ತು ಇತರರು ತಮ್ಮ ಜಾಮೀನು ಅರ್ಜಿಯನ್ನು ಏಕಪಕ್ಷೀಯವಾಗಿ ತಿರ್ಮಾನಿಸಬೇಕು ಎಂದು ಕೇಳಿಕೊಂಡಿದ್ದರು.
ಅಗಸ್ಟ್ 24ರೊಳಗೆ ಟಾಡಾ ನ್ಯಾಯಾಲಯವು ಶಿಕ್ಷೆಯ ಆದೇಶ ಪತ್ರವನ್ನು ಜಾರಿ ಮಾಡಲಿದೆ ಎಂದು ಹೇಳಿದ್ದು, ಇನ್ನೂ ಆದೇಶ ಪತ್ರಗಳು ಸಿದ್ದವಾಗಿಲ್ಲ ಎಂದು ತಿಳಿಸಿದೆ.
|