ಬಾಲಿವುಡ್ ಚಿತ್ರನಟ ಸಂಜಯದತ್ ಅವರಿಗೆ ಸುಪ್ರೀಂಕೋರ್ಟ್ ನೀಡಿರುವ ಜಾಮೀನು ಆದೇಶದ ಪ್ರತಿ ಜೈಲು ಅಧಿಕಾರಿಗಳನ್ನು ತಲುಪಿದ ಕೂಡಲೇ ದತ್ ಅವರನ್ನು ಯೆರವಾಡ ಜೈಲಿನಿಂದ ಮಂಗಳವಾರ ಬಿಡುಗಡೆ ಮಾಡಲಾಗುವುದೆಂದು ನಿರೀಕ್ಷಿಸಲಾಗಿದೆ. ಸುಪ್ರೀಂಕೋರ್ಟ್ ಆದೇಶವನ್ನು ಯೆರವಾಡ ಜೈಲಿನ ಅಧಿಕಾರಿಗಳಿಗೆ ಹಸ್ತಾಂತರಿಸುವ ಮುನ್ನ ಮುಂಬೈನ ಟಾಟಾ ಕೋರ್ಟ್ ಗಮನಕ್ಕೆ ತರಲಾಗುವುದು ಎಂದು ಜೈಲಿನ ಅಧಿಕಾರಿ ಸತೀಶ್ ಮಾಥುರ್ ತಿಳಿಸಿದರು . ಟಾಡಾ ಕೋರ್ಟ್ ವಿಧಿಸಿದ ಆರು ವರ್ಷಗಳ ಕಠಿಣ ಶಿಕ್ಷೆಯಲ್ಲಿ ಮೂರು ವಾರಗಳನ್ನು ಜೈಲಿನಲ್ಲಿ ಕಳೆದ ಸಂಜಯ್ ದತ್‌ಗೆ ಮಂಗಳವಾರ ಬಿಡುಗಡೆಯಾಗುವ ಯೋಗ ಸಿಕ್ಕಿದೆ . ವಿಚಾರಣಾಧೀನ ಕೈದಿಗಳನ್ನು ಮಾತ್ರ ಇಡುವ ಮುಂಬೈನ ಆರ್ಥರ್ ರಸ್ತೆ ಬಂದೀಖಾನೆಯಿಂದ ಕಳೆದ ಆ.2ರಂದು ರಾತ್ರಿ ಯೆರವಾಡ ಜೈಲಿಗೆ ತರಲಾಗಿತ್ತು, ಮಾಮೂಲಿ ವೈದ್ಯಕೀಯ ಪರೀಕ್ಷೆ ಬಳಿಕ ಒಂದು ವಾರದ ಕೆಳಗೆ ಅವರಿಗೆ ಜೈಲಿನಲ್ಲಿ ಬಿದಿರಿನ ಕೆಲಸವನ್ನು ವಹಿಸಲಾಗಿತ್ತೆಂದು ಹೇಳಲಾಗಿದೆ.
|