ಅನಿರ್ಧಿಷ್ಟಾವಧಿಯವರೆಗೆ ಮುಷ್ಕರವನ್ನು ಹೂಡಿದ್ದ ಸಾರ್ವಜನಿಕ ವಲಯದ ತೈಲ ನಿಗಮದ ಅಧಿಕಾರಿಗಳು, ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೆವ್ರಾ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಭರವಸೆ ನೀಡಿದ್ದರಿಂದ ಅನಿರ್ಧಿಷ್ಟಾವಧಿಯ ಮುಷ್ಕರವನ್ನು ಕೈಬಿಟ್ಟಿದ್ದಾರೆ.
ತೈಲ ನಿಗಮದ ಅಧಿಕಾರಿಗಳ ವೇತನ ಪರಿಷ್ಕರಣೆಯಲ್ಲಿ ಆಗಿರುವ ವಿಳಂಬವನ್ನು ಒಪ್ಪಿಕೊಂಡಿರುವ ಕೇಂದ್ರ ಸರಕಾರ ಮಧ್ಯಂತರ ಪರಿಹಾರದಲ್ಲಿ ಏರಿಕೆ ಮಾಡುವುದಾಗಿ ಭರವಸೆ ನೀಡಿದೆ.ಜನೆವರಿ,2007ರಿಂದ ಮಧ್ಯಂತರ ಪರಿಹಾರದಲ್ಲಿ ಹೆಚ್ಚಳ ಮಾಡುವುದಾಗಿ ಕೇಂದ್ರ ಸಚಿವರು ಮುಷ್ಕರ ನಿರತ ಅಧಿಕಾರಿಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಮಾತುಕತೆಯಲ್ಲಿ ತಿಳಿಸಿದ್ದಾರೆ.
ಇಂಡಿಯನ್ ಆಯಿಲ್, ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೆಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಮತ್ತು ಭಾರತ್ ಪೆಟ್ರೋಲಿಯಂ ಕಂಪನಿಗಳ ಸುಮಾರು 45 ಸಾವಿರಕ್ಕೂ ಹೆಚ್ಚು ಅಧಿಕಾರಿಗಳು ಮಂಗಳವಾರ ಬೇಳಗಿನ ಆರು ಗಂಟೆಯಿಂದ ಮುಷ್ಕರವನ್ನು ಹೂಡಿದ್ದರು. ದಿನ ಭತ್ಯೆಯ ಶೇ 50ರಷ್ಟನ್ನು ಮೂಲ ವೇತನದಲ್ಲಿ ಸಮ್ಮಿಳಿತಗೊಳಿಸಬೇಕು. ಕಂಪನಿ ನೀಡಿರುವ ಸೌಲಭ್ಯಗಳ ಮೇಲೆ ವಿಧಿಸಲಾಗಿರುವ ತೆರಿಗೆಯನ್ನು ರದ್ದುಗೊಳಿಸಬೇಕು ಎಂದು ಬೇಡಿಕೆಯನ್ನು ಮಂಡಿಸಿದ್ದರು.
|