ಭಾರತಕ್ಕೆ ಭೇಟಿ ನೀಡಿರುವ ಜಪಾನಿನ ಪ್ರಧಾನಮಂತ್ರಿ ಶಿಂಜೊ ಅಬೆ ಬುಧವಾರ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು.
ಜಪಾನ್ ಪರಮಾಣು ಪೂರೈಕೆದಾರ ರಾಷ್ಟ್ರಗಳ ಗುಂಪಿನ(ಎನ್‌ಎಸ್‌ಜಿ) ಸದಸ್ಯ ರಾಷ್ಟ್ರವಾಗಿರುವುದರಿಂದ ಭಾರತಕ್ಕೆ ಅವರ ಭೇಟಿ ನಿರ್ಣಾಯಕ ಸಂದರ್ಭದಲ್ಲಾಗಿದೆ.
ಭಾರತ-ಅಮೆರಿಕ ಪರಮಾಣು ಒಪ್ಪಂದಕ್ಕೆ ಎಡಪಕ್ಷಗಳು ಪ್ರತಿರೋಧ ಸೂಚಿಸಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಮನಮೋಹನ ಸಿಂಗ್ ಮತ್ತು ಅಬೆ ನಡುವೆ ಅಣುಶಕ್ತಿ ಸಹಕಾರದ ಬಗ್ಗೆ ಪ್ರಮುಖವಾಗಿ ಚರ್ಚೆಯಾಗುವ ನಿರೀಕ್ಷೆಯಿದೆ.ಎನ್‌ಎಸ್‌ಜಿಯಲ್ಲಿ ಪರಮಾಣು ಒಪ್ಪಂದಕ್ಕೆ ಜಪಾನ್ ಬೆಂಬಲವನ್ನು ಭಾರತ ಕೋರಿದೆ.
ಆದರೆ ಅಣ್ವಸ್ತ್ರ ಪ್ರಸರಣ ವಿಷಯದ ಬಗ್ಗೆ ಅತೀ ಸೂಕ್ಷ್ಮವಾಗಿರುವ ಜಪಾನ್‌ಗೆ ಮನದಟ್ಟು ಮಾಡಲು ಕೆಲವು ರಾಜತಾಂತ್ರಿಕ ತಂತ್ರಗಳು ಅಗತ್ಯವಾಗಿದೆ.ಅಬೆ ಅವರನ್ನು ಉನ್ನತ ತಂತ್ರಜ್ಞಾನದ ಉಪಕರಣಗಳಲ್ಲಿ ವಿಶೇಷತೆ ಹೊಂದಿದ ಮಿಟ್ಸುಬಿಷಿ, ಹಿಟಾಚಿ ಮತ್ತು ತೋಷಿಬಾ ಕಂಪೆನಿಗಳಿಗೆ ಸೇರಿದ 200 ನಿಯೋಗಿಗಳು ಜತೆಗೂಡಿದ್ದಾರೆ.
|